ಕೊರೋನಾ ವೈರಸ್‌ಗೆ ಗಂಗಾಜಲ ಔಷಧನಾ..? – ಪ್ರಧಾನಿ ಮೋದಿ ಸರ್ಕಾರದ ಪ್ರಶ್ನೆ – ಇಲ್ಲ ಎಂದ ತಜ್ಞರು..!

ಮಹಾಮಾರಿ ಕೊರೋನಾ ವೈರಸ್‌ಗೆ ಗಂಗಾನದಿಯ ನೀರು ಮದ್ದೇ..? ಅದರ ಬಗ್ಗೆ ಯಾಕೆ ಅಧ್ಯಯನ ಮಾಡಬಾರದು..? ಅಂದಹಾಗೆ ಇಂಥದ್ದೊಂದು ಪ್ರಸ್ತಾಪವನ್ನು ಮುಂದಿಟ್ಟಿದ್ದು ಬೇರೆ ಯಾರೂ ಅಲ್ಲ, ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯ.

ಇಂಥದ್ದೊಂದು ಪ್ರಸ್ತಾಪವನ್ನು ಜಲಶಕ್ತಿ ಸಚಿವಾಲಯ ಕಳುಹಿಸಿದ್ದು ರೋಗ ರುಜಿನಗಳ ಸಂಬಂಧ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವ ಅತ್ಯುನ್ನತ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಗೆ.

ಐಸಿಎಂಆರ್‌ನಿಂದ ಕೇಂದ್ರ ಜಲ ಶಕ್ತಿ ಸಚಿವಾಲಯಕ್ಕೆ ಸಿಕ್ಕ ಉತ್ತರ – ಇಲ್ಲ ಎನ್ನುವುದು.

ಕೊರೋನಾ ರೋಗಿಗಳನ್ನು ಗಂಗಾ ಜಲದಿಂದ ಗುಣಪಡಿಸಬಹುದೇ ಎಂಬುದನ್ನು ಅಧ್ಯಯನ ಮಾಡಲು ಸದ್ಯಕ್ಕೆ ಬಲವಾದ ಸಾಕ್ಷ್ಯಗಳು ಇಲ್ಲ ಎಂದು ಐಸಿಎಂಆರ್‌ ಹೇಳಿದೆ.

ಗಂಗಾಜಲ ಸೇವನೆಯಿಂದ ಕೊರೋನಾ ರೋಗಿಗಳು ಗುಣಮುಖರಾಗಬಹುದೇ ಎನ್ನುವುದನ್ನು ಅಧ್ಯಯನ ಮಾಡುವಂತೆ ಜಲಶಕ್ತಿ ಸಚಿವಾಲಯಕ್ಕೆ ಎನ್‌ಜಿಒಗಳು ಮತ್ತು ಇತರೆ ವ್ಯಕ್ತಿಗಳು ಒತ್ತಡವನ್ನು ಹಾಕಿದ್ದರು.

ಆದರೆ ಈ ಪ್ರಸ್ತಾಪವನ್ನು ಒಪ್ಪಿಕೊಳ್ಳುವುದಕ್ಕೆ ತುಂವಾ ವೈಜ್ಞಾನಿಕ ಮಾಹಿತಿ, ಕಲ್ಪನೆಗೆ ಅಗತ್ಯವಾದ ಪುರಾವೆಗಳು ಬೇಕು ಎಂದು ಹೇಳಿ ಐಸಿಎಂಆರ್‌ ಪ್ರಸ್ತಾಪವನ್ನು ತಿರಸ್ಕರಿಸಿದೆ.

LEAVE A REPLY

Please enter your comment!
Please enter your name here