ಕೊರೋನಾ ವಿಶೇಷ ಪ್ಯಾಕೇಜ್‌ ಜುಮ್ಲಾ – ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಉಂಟಾಗಿರುವ ಬಿಕ್ಕಟ್ಟಿಗೆ ಪುನಶ್ಚೇತನ ನೀಡಲು ಕೇಂದ್ರ ಸರಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಜುಮ್ಲಾ ಘೋಷಣೆಯಾಗಿದೆ.ಪ್ರಧಾನಿಯವರದು ಒಂದು ಸುಳ್ಳು ಆಶ್ವಾಸನೆಗಳ ಘೋಷಣೆ ಎಂದು ಮಡಿಕೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಟೀಕೆ ಮಾಡಿದ್ದಾರೆ.

ಕೇರಳ ರಾಜ್ಯ 20 ಸಾವಿರ ಕೋಟಿ, ತೆಲಂಗಾಣ 35 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿವೆ. ಕರ್ನಾಟಕ ರಾಜ್ಯಕ್ಕೆ ಕನಿಷ್ಠ 50 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಬೇಕಿತ್ತು.

ಇದೀಗ ಸರ್ಕಾರ ಪಿಪಿಇ ಕಿಟ್, ವೆಂಟಿಲೇಟರ್‌, ಟೆಸ್ಟಿಂಗ್‌ ಕಿಟ್‌, ಸ್ಯಾನಿಟೈಸರ್‌ ಖರೀದಿಯಲ್ಲೂ ಅವ್ಯವಹಾರ ಮಾಡಿದೆ.

ಇದರ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಮಡಿಕೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಹೇಳಿದ್ದಾರೆ.

LEAVE A REPLY

Please enter your comment!
Please enter your name here