ಕೊರೋನಾ ವಿರುದ್ಧ ಹೋರಾಟ – ಜೈನ ಟೆಂಪಲ್‌ ಟ್ರಸ್ಟ್‌ನಿಂದ ದೇಣಿಗೆ

ಕೊರೋನಾ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಸರ್ಕಾರಕ್ಕೆ ಜೈನ ಸಮುದಾಯ ದೇಣಿಗೆ ನೀಡಿದೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ 51 ಲಕ್ಷ ರೂಪಾಯಿಗಳ ದೇಣಿಗೆ ನೀಡಿದೆ.

ಇವತ್ತು ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಆದ ಜೈನ್‌ ಟೆಂಪಲ್‌ ಟ್ರಸ್ಟ್‌ನ ಪದಾಧಿಕಾರಿಗಳು 51 ಲಕ್ಷ ರೂಪಾಯಿ ಮೊತ್ತದ ಚೆಕ್‌ ಹಸ್ತಾಂತರಿಸಿದರು.

ಈ ವೇಳೆ ಶಾಸಕರಾದ ಬಿಜೆಪಿ ಎಂಎಲ್‌ಸಿ ಲಹರ್‌ ಸಿಂಗ್‌ ಸಿರೋಯಾ, ಪ್ರಕಾಶ್‌ ರಾಥೋಡ್‌, ಪ್ರಕಾಶ್‌ ಪಿರ್ಗಲ್‌, ಭವರ್‌ಲಾಲ್‌ ಕಟಾರಿಯಾ ಮತ್ತು ದೀಪಕ್‌ ಶಾ ಉಪಸ್ಥಿತರಿದ್ದರು.

ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ಟ್ವೀಟಿಸಿದ್ದಾರೆ.

LEAVE A REPLY

Please enter your comment!
Please enter your name here