ಕೊರೋನಾ ಲಸಿಕೆ ಪಡೆದ ಸಿದ್ದಗಂಗಾದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು

ಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಇಂದು ಕೊರೋನಾ ಲಸಿಕೆ ಪಡೆದರು.ಶ್ರೀ ಮಠದ ಆವರಣದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀ ಸಿದ್ದಗಂಗಾ ಸ್ವಾಮೀಜಿಗಳು ಕೊರೋನಾ ಲಸಿಕೆ ಪಡದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಿ.ನಾಗೇಂದ್ರಪ್ಪ, ಶ್ರೀ ಸಿದ್ದಗಂಗಾ ಆಸ್ಪತ್ರೆಯ ಎಂ.ಡಿ ಡಾ.ಎಸ್.ಪರಮೇಶ್ವರಪ್ಪ ಸೇರಿದಂತೆ ಹಲವರಿದ್ದರು.

ಈ ವೇಳೆ ಸಿದ್ದಲಿಂಗ ಶ್ರೀಗಳು ಕೊರೋನಾ ಸೋಂಕು ಹರಡದಂತೆ ತಡೆಯಲು ಪ್ರತಿಯೊಬ್ಬರು ಸರ್ಕಾರದ ನಿರ್ದೇಶನದಂತೆ ಲಸಿಕೆ ಪಡೆದುಕೊಳ್ಳ ಬೇಕು ಎಂದು ಹೇಳಿದರು.

ಈ ಮೊದಲು ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ, ಇನ್ಪೋಸಿಸ್‌ನ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಮತ್ತಿತರರು ಲಸಿಕೆ ಪಡೆದಿದ್ದರು.

LEAVE A REPLY

Please enter your comment!
Please enter your name here