ಕೊರೋನಾ ರೆಡ್‌ಝೋನ್‌ನಿಂದ ಕರ್ನಾಟಕದ ಜಿಲ್ಲೆಗಳು ಹೊರಬರ್ತಾವಾ..? – ಈ ಸುದ್ದಿ ಓದಿ..!

ದೇಶಾದ್ಯಂತ ಸೋಮವಾರದಿಂದ ಹೊಸ ಲಾಕ್‌ಡೌನ್‌ ಮಾರ್ಗಸೂಚಿ ಜಾರಿ ಆಗಲಿದ್ದು, ಹೊಸ ಲಾಕ್‌ಡೌನ್‌ನಲ್ಲಿ ಕರ್ನಾಟಕಕ್ಕೆ ಮಹತ್ವದ ರಿಲೀಫ್‌ ಸಿಗುವ ನಿರೀಕ್ಷೆ ಇದೆ.

ದೇಶದಲ್ಲಿ ಅತೀ ಹೆಚ್ಚು ಕೊರೋನಾ ಕಾಣಿಸಿಕೊಂಡಿರುವ ಜಿಲ್ಲೆಗಳ ಸಂಖ್ಯೆ ಈಗಿರುವ 114ರಿಂದ 30ಕ್ಕೆ ಇಳಿಯುವ ನಿರೀಕ್ಷೆ ಇದೆ. ಪ್ರತಿ ವಾರ ಕೇಂದ್ರ ಆರೋಗ್ಯ ಸಚಿವಾಲಯ ಕೊರೋನಾ ಜಿಲ್ಲೆಗಳ ಪಟ್ಟಿಯನ್ನು ಪರಿಷ್ಕರಣೆ ಮಾಡುತ್ತದೆ.

ನವದೆಹಲಿಯಲ್ಲಿ ಇವತ್ತು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಪ್ರೀತಿ ಸುದಾನ್‌ ನೇತೃತ್ವದಲ್ಲಿ ಕೊರೋನಾ ಕೇಸ್‌ ಅತೀ ಹೆಚ್ಚು ಏರಿಕೆ ಕಾಣ್ತಿರುವ 30 ನಗರಪಾಲಿಕೆ ಮತ್ತು ನಗರಸಭೆ ಪ್ರದೇಶಗಳ ಬಗ್ಗೆ ಸಮಾಲೋಚನೆ ನಡೆಯಿತು. ಈ ವೇಳೆ ನಗರಪ್ರದೇಶಗಳಲ್ಲಿ ಕೊರೋನಾ ತಡೆಗೆ ಅಗತ್ಯವಾದ ಮಾರ್ಗಸೂಚಿಯನ್ನೂ ಹಂಚಿಕೊಳ್ಳಲಾಯಿತು.

ಮಹಾರಾಷ್ಟ್ರ, ತಮಿಳುನಾಡು, ಗುಜರಾತ್‌, ದೆಹಲಿ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ, ಉತ್ತರಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಪಾಲಿಕೆ ಮತ್ತು ನಗರಸಭೆಗಳ ಆಯುಕ್ತರು, ಜಿಲ್ಲಾಧಿಕಾರಿಗಳು ಪಾಲ್ಗೊಂಡಿದ್ದರು.

ಆದರೆ ಇವತ್ತು ಚರ್ಚೆ ಆದ 30 ನಗರಗಳಲ್ಲಿ ಕರ್ನಾಟಕದ ಒಂದೇ ಒಂದು ಜಿಲ್ಲೆಯೂ ಇಲ್ಲ. ಸದ್ಯ ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಯಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು ಈ ಮೂರು ಜಿಲ್ಲೆಗಳಷ್ಟೇ ರೆಡ್‌ಝೋನ್‌ನಲ್ಲಿವೆ. ಆದರೆ ಮೈಸೂರು ನಿನ್ನೆಯಿಂದ ಕೊರೋನಾ ಮುಕ್ತ ಜಿಲ್ಲೆ ಆಗಿದೆ.

ಮೂಲಗಳ ಪ್ರಕಾರ ದೇಶದಲ್ಲಿ 114 ಇರುವ ರೆಡ್‌ಝೋನ್‌ ಜಿಲ್ಲೆಗಳ ಸಂಖ್ಯೆಯನ್ನು 30ಕ್ಕೆ ಇಳಿಸುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ ಆ 30 ನಗರಗಳು ಹೀಗಿವೆ. ಮುಂಬೈ, ಚೆನ್ನೈ, ಸೂರತ್‌, ಆಗ್ರಾ, ಇಂದೋರ್‌, ಪುಣೆ, ಅಹಮದಾಬಾದ್‌, ದೆಹಲಿ, ಕೋಲ್ಕತ್ತಾ, ಜೈಪುರ, ನಾಶಿಕ್‌ ಜೋಧ್‌ಪುರ್‌, ಆಗ್ರಾ, ತಿರುವಳ್ಳುರ್‌, ಔರಂಗಬಾದ್‌, ಕುಡಲೂರು, ಹೈದ್ರಾಬಾದ್‌, ಚೆಂಗಲಪಟ್ಟು, ಅರಿಲೂರು, ಹೌರಾ, ಕರ್ನೂಲ್‌, ಭೋಪಾಲ್‌, ಅಮೃತಸರ, ವಿಳ್ಳುಪುರಂ, ವಡೋದರಾ, ಉದಯ್‌ಪುರ, ಪಾಲ್ಗಾರ್‌, ಬೆಹರ್ನ್‌ಪುರ್‌, ಸೋಲಾಪುರ್‌, ಮೀರತ್‌.

ಕೊರೋನಾ ಸೋಂಕಿನ ಪ್ರಕರಣಗಳು, ಕೊರೋನಾದಿಂದ ಮೃತಪಟ್ಟವರ ಸಂಖ್ಯೆ, ಕೊರೋನಾ ಎಷ್ಟು ದಿನಗಳಿಗೆ ದ್ವಿಗುಣಗೊಳ್ಳುತ್ತಿದೆ ಎಂಬ ಲೆಕ್ಕಾಚಾರ, 10 ಲಕ್ಷ ಜನಕ್ಕೆ ಆ ಜಿಲ್ಲೆಗಳಲ್ಲಿ ಎಷ್ಟು ಜನರಿಗೆ ಕೊರೋನಾ ಪತ್ತೆ ಪರೀಕ್ಷೆ ಮಾಡಲಾಗುತ್ತಿದೆ ಎಂಬ ಅಂಶಗಳ ಆಧಾರದ ಮೇಲೆ ಕೊರೋನಾ ಸೋಂಕಿತ ಜಿಲ್ಲೆಗಳನ್ನು ರೆಡ್‌, ಆರೆಂಜ್‌, ಗ್ರೀನ್‌ಝೋನ್‌ ಜಿಲ್ಲೆಗಳೆಂದು ವಿಂಗಡಿಸಲಾಗುತ್ತಿದೆ.

ಕಂಟೈನ್‌ಮೆಂಟ್‌ಝೋನ್‌ ಮತ್ತು ಬಫರ್‌ಝೋನ್‌ಗಳ ಗುರುತಿಸುವಿಕೆ, ಕಂಟೈನಗ್‌ಮೆಂಟ್‌ಝೋನ್‌ಗಳಲ್ಲಿ ನಿರ್ಬಂಧಿಸಬೇಕಾಗಿರುವ ಆರ್ಥಿಕ ಚಟುವಟಿಕೆಗಳು, ಮನೆ ಮನೆಗೂ ತೆರಳಿ ಪರೀಕ್ಷೆ, ಕೊರೋನಾ ಸೋಂಕಿತರ ಸಂಪರ್ಕದಲ್ಲಿದವರ ಪತ್ತೆ ಮುಂದಾಯ ವಿಷಯಗಳ ಬಗ್ಗೆಯೂ ಚರ್ಚೆ ನಡೆದಿದೆ.

ಕೊರೋನಾ ಕೇಸ್‌ ಮತ್ತು ಸೋಂಕಿತರ ಸಂಪರ್ಕದಲ್ಲಿದ್ದವರು, ಎಷ್ಟು ಏರಿಯಾಗಳಿಗೆ ಕೊರೋನಾ ಕೇಸ್ ಮತ್ತು ಸೋಂಕಿತರ ಸಂಪರ್ಕದಲ್ಲಿದ್ದವರು ಹರಡಿಕೊಂಡಿದ್ದಾರೆ ಎಂಬ ಆಧಾರದ ಮೇಲೆ ಕಂಟೈನ್‌ಮೆಂಟ್‌ಝೋನ್‌ಗಳನ್ನು ನಿರ್ಧರಿಸಲಾಗುತ್ತದೆ.

ಸಾಮಾನ್ಯವಾಗಿ ಕಂಟೈನ್‌ಝೋನ್‌ ಎಂದರೆ ಕೊರೋನಾ ಸೋಂಕಿತರು ವಾಸಿಸುವ ಏರಿಯಾದ 100 ಮೀಟರ್‌ ಸುತ್ತಳತೆ ಪ್ರದೇಶ. ನಗರ ಪ್ರದೇಶಗಳಲ್ಲಿ ಬಫರ್‌ಝೋನ್‌ ಎಂದರೆ ಕಂಟೈನ್‌ಮೆಂಟ್‌ಝೋನ್‌ನಿಂದ 1 ಕಿಲೋ ಮೀಟರ್‌ ವ್ಯಾಪ್ತಿ ಆಗಿರುತ್ತದೆ.

LEAVE A REPLY

Please enter your comment!
Please enter your name here