ಕೊರೋನಾ ರಜೆಯಲ್ಲಿ ನಿಮ್ಮ ಮಕ್ಕಳು ಹೀಗೆ ಮಾಡಲಿ

ಕೊರೋನಾ ರಜೆ ಜೊತೆ ಜೊತೆಗೆ ಬೇಸಿಗೆ ರಜೆಯೂ ಶುರುವಾಗಿದೆ. ಆದರೆ, ಕೊರೋನಾ ಕಾರಣದಿಂದ ಎಲ್ಲಿಯೂ ಹೋಗುವಂತಿಲ್ಲ. ಪ್ರವಾಸ, ರೆಸಾರ್ಟ್, ಅಜ್ಜಿ ಮನೆ, ಅತ್ತೆ ಮನೆ.. ಹೀಗೆ ಯಾವುದಕ್ಕೂ ಹೋಗುವಂತಿಲ್ಲ. ಅಸಲಿಗೆ ಮನೆಯಿಂದ ಹೊರಗೆ ಹೋಗುವಂತೆಯೇ ಇಲ್ಲ. ಮಕ್ಕಳಿಗೂ ಮನೆಯಲ್ಲೇ ಇದ್ದು ಇದ್ದು ಬೋರ್ ಆಗುತ್ತದೆ.

ಈ ಸಂದರ್ಭದಲ್ಲಿ ನಿಮ್ಮ ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸಬೇಕು. ತಂದೆ-ತಾಯಿ, ಅಜ್ಜ-ಅಜ್ಜಿ, ಅಣ್ಣ-ತಮ್ಮ, ಅಕ್ಕ-ತಂಗಿ, ಗುರು ಹಿರಿಯರ ಜೊತೆಗಿನ ಸಂಬಂಧಗಳನ್ನು ಅರಿತುಕೊಳ್ಳಲು ನೆರವಾಗಿ.

ಚಿತ್ರ ಕಲೆ, ಕರಕುಶಲ ಕಲೆ, ಉತ್ತಮ ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸಿ. ಮಕ್ಕಳೊಂದಿಗೆ ಮನೆ ಮಂದಿಯೆಲ್ಲಾ ಕುಳಿತು ಕೇರಮ್, ಚೆಸ್, ಹಾವು ಏಣಿ ಆಟ, ಚೌಕಾ ಬಾರಾ ಆಡಿ, ಸೋಲು ಗೆಲುವಿನ ರುಚಿ ತೋರಿಸಿ.

ಸೋಲು-ಗೆಲುವು ಜೀವನದ ಅವಿಭಾಜ್ಯ ಅಂಗಗಳು.. ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸುವ ಮನಸ್ಥಿತಿಯನ್ನು ನಿಮ್ಮ ಮಕ್ಕಳಲ್ಲಿ ಬೆಳೆಸಿ..

ಕೊನೆಯದಾಗಿ, ಟಿವಿ, ಮೊಬೈಲ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ.. ಈ ಎರಡರಿಂದ ನಿಮ್ಮ ಮಕ್ಕಳನ್ನು ಆದಷ್ಟು ದೂರ ಇರಿಸಿ.

LEAVE A REPLY

Please enter your comment!
Please enter your name here