ಕೊರೋನಾ ದಾಖಲೆ.. ಒಂದೇ ದಿನ 25ಸಾವಿರ ಸೋಂಕು.. 613 ಸಾವು..

ದೇಶದಲ್ಲಿ ಕೊರೋನಾ ಅಟ್ಟಹಾಸ ಮೆರೆ ಮೀರಿದೆ. ಕಳೆದ 24ಗಂಟೆಗಳಲ್ಲಿ ದಾಖಲೆಯ ಸಂಖ್ಯೆಯಲ್ಲಿ ಸೋಂಕು ಪ್ರಕರಣಗಳು ವರದಿಯಾಗಿವೆ. ನಿನ್ನೆ ಒಂದೇ ದಿನ 24,850 ಮಂದಿ ಸೋಂಕಿತರಾಗಿದ್ದಾರೆ. ಮರಣಗಳ ಸಂಖ್ಯೆಯೂ ಇದೇ ಮೊದಲ ಬಾರಿಗೆ 600 ದಾಟಿದೆ. 613 ಮಂದಿ ಕೊರೋನಾಗೆ ಬಲಿ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಸದ್ಯ ದೇಶದಲ್ಲಿ 6.74 ಲಕ್ಷ ಮಂದಿ ಕೊರೋನಾ ಬಾಧಿತರಾಗಿದ್ದು, ಇದರಲ್ಲಿ 19,280 ಮಂದಿ ಸಾವನ್ನಪ್ಪಿದ್ದಾರೆ. ಚೇತರಿಸಿಕೊಂಡವರ ಸಂಖ್ಯೆ 4ಲಕ್ಷ ದಾಟಿದೆ. 2.45 ಲಕ್ಷ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಒಂದೇ ದಿನ 15ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಚೇತರಿಕೆ ಪ್ರಮಾಣ ಶೇಕಡಾ 60ಕ್ಕಿಂತ ಹೆಚ್ಚಿದೆ. ಮರಣ ಪ್ರಮಾಣ 2.9ರಷ್ಟಿದೆ.

ಜಗತ್ತಿನಲ್ಲಿ ಮೂರನೇ ಸ್ಥಾನಕ್ಕೆ ಭಾರತ ಜಿಗಿತ..

ಶರವೇಗದಲ್ಲಿ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಜಗತ್ತಿನ ಸೋಂಕಿತ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನಕ್ಕೆ ಜಿಗಿದಿದೆ. ರಷ್ಯಾ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಅಮೆರಿಕಾ ಮೊದಲ ಸ್ಥಾನದಲ್ಲಿದ್ದರೇ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ.

ದಿನದ ಸೋಂಕಿತರ ಪಟ್ಟಿಯಲ್ಲಿ ಭಾರತ ನಂ.2

ಸೋಂಕಿತರ ಪಟ್ಟಿಯಲ್ಲಿರುವ ದೇಶಗಳ ಪಟ್ಟಿಯಲ್ಲಿ ಅಮೆರಿಕಾ ನಂತರ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಎರಡನೇ ದೇಶ ಭಾರತ. ಬ್ರೆಜಿಲ್, ರಷ್ಯಾದಲ್ಲಿ ದಿನವೊಂದಕ್ಕೆ 7-8ಸಾವಿರ ಪ್ರಕರಣಗಳಷ್ಟೇ ವರದಿಯಾಗುತ್ತಿವೆ.

LEAVE A REPLY

Please enter your comment!
Please enter your name here