ಕೊರೋನಾ ತಡೆ ಹೋರಾಟದಲ್ಲಿ ಭಾರತದ ಬೆನ್ನಿಗೆ ಇರಿದ ಚೀನಾ – ಟೆಸ್ಟ್‌ ಕಿಟ್‌ಗಳಲ್ಲಿ ಲೋಪ, ಕಿಟ್‌ ಬಳಕೆಗೆ ತಡೆ

ಕೊರೋನಾ ಜ್ವರ ಪತ್ತೆ ಪರೀಕ್ಷೆಗಾಗಿ ಚೀನಾದಿಂದ ಆಮದು ಮಾಡಿಕೊಳ್ಳಲಾಗಿರುವ ರ್ಯಾಪಿಡ್‌ ಟೆಸ್ಟ್‌ ಕಿಟ್‌ಗಳನ್ನು ಬಳಸದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ರಾಜ್ಯಗಳಿಗೆ ಸೂಚಿಸಿದೆ. ಈ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಚೀನಾ ಭಾರತದ ಬೆನ್ನಿಗೆ ಚೂರಿ ಇರಿದಿದೆ.

ಚೀನಾದಿಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬರೋಬ್ಬರೀ 3 ಲಕ್ಷ ರ್ಯಾಪಿಡ್‌ ಟೆಸ್ಟ್‌ ಕಿಟ್‌ಗಳನ್ನು ಆಮದು ಮಾಡಿಕೊಂಡಿತ್ತು. ಬಳಿಕ ಈ ಕಿಟ್‌ಗಳನ್ನು ಕೊರೋನಾ ಹಾಟ್‌ಸ್ಪಾಟ್‌ಗಳಲ್ಲಿ ತುರ್ತು ಪರೀಕ್ಷೆಗಾಗಿ ಹಂಚಿಕೆ ಮಾಡಲಾಗಿತ್ತು.

ಎರಡು ದಿನದ ಮಟ್ಟಿಗೆ ರ್ಯಾಪಿಡ್‌ ಟೆಸ್ಟ್‌ ಕಿಟ್‌ಗಳನ್ನು ಬಳಕೆ ಮಾಡದಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ನಮ್ಮ ತಜ್ಞರು ಸ್ಥಳಗಳಿಗೆ ತೆರಳಿ ಕಿಟ್‌ಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ಮಾಡಲಿದ್ದಾರೆ. ಇದಾದ ಬಳಿಕ ಲೋಪದೋಷ ಕಂಡುಬಂದಿರುವ ಕಿಟ್‌ಗಳನ್ನು ಬದಲಿಸಿ ಕೊಡುವಂತೆ ಸಂಬಂಧಿಸಿದ ಕಂಪನಿಗೆ ತಿಳಿಸಲಾಗುವುದು

ಎಂದು ಐಸಿಎಂಆರ್‌ ಮುಖ್ಯಸ್ಥ ರಮಣ್‌ ಆರ್‌ ಗಂಗಾಖೇಡ್ಕರ್‌ ಹೇಳಿದ್ದಾರೆ.

ನಾವು ರಾಜ್ಯಗಳಿಗೆ ರ್ಯಾಪಿಡ್‌ ಟೆಸ್ಟ್‌ ಕಿಟ್‌ಗಳನ್ನು ಹಂಚಿಕೆ ಮಾಡಿದ್ದೇವು. ಆದ್ರೆ ಈ ಟೆಸ್ಟ್‌ ಕಿಟ್‌ಗಳಲ್ಲಿ ಲೋಪದೋಷವಿದೆ ಎಂದು ರಾಜ್ಯವೊಂದು ಹೇಳಿತ್ತು. ನಾವು ಮೂರು ರಾಜ್ಯಗಳಲ್ಲೂ ಟೆಸ್ಟ್‌ ಕಿಟ್‌ನಲ್ಲಿ ಲೋಪದೋಷ ಇರುವುದನ್ನು ದೃಢೀಕರಿಸಿಕೊಂಡಿದ್ದೇವೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ

ಎಂದೂ ಐಸಿಎಂಆರ್‌ ಮುಖ್ಯಸ್ಥರು ಹೇಳಿದ್ದಾರೆ.

ಪಶ್ಚಿಮ ಬಂಗಾಳ, ರಾಜಸ್ಥಾನ ಒಳಗೊಂಡಂತೆ ಹಲವು ರಾಜ್ಯಗಳು ಕಿಟ್‌ನ ಬಳಕೆಯನ್ನು ನಿಲ್ಲಿಸಿಬಿಟ್ಟಿವೆ. ದೇಶದಲ್ಲೇ ಮೊದಲ ಬಾರಿಗೆ ಕಿಟ್‌ ಬಳಸಿದ್ದ ರಾಜಸ್ಥಾನದಲ್ಲಿ ಕಿಟ್‌ ಫಲಿತಾಂಶ ಪ್ರಮಾಣ ಕೇವಲ ಶೇ 5.4ರಷ್ಟಿದೆ.

ವಿಶೇಷ ಎಂದರೆ ರ್ಯಾಪಿಡ್‌ ಟೆಸ್ಟ್‌ಗಳನ್ನು ರಾಜ್ಯ ಸರ್ಕಾರಗಳು ಸ್ವತಂತ್ರವಾಗಿ ಆಮದು ಮಾಡಿಕೊಳ್ಳುವಂತಿಲ್ಲ ಎಂದು ಆದೇಶಿಸಿದ್ದ ಪ್ರಧಾನಿ ಮೋದಿ ಸರ್ಕಾರ ಖುದ್ದಾಗಿ ತಾನೇ ಆಮದು ಮಾಡಿಕೊಂಡು ರಾಜ್ಯಗಳಿಗೆ ಹಂಚುತ್ತಿದೆ.

LEAVE A REPLY

Please enter your comment!
Please enter your name here