ಕೊರೋನಾ ಕೇಸ್‌ನಲ್ಲಿ 5ನೇ ಸ್ಥಾನಕ್ಕೇರಿದ ಭಾರತ – ಇಟಲಿ ಬಳಿಕ ಈಗ ಸ್ಪೇನ್‌ಗಿಂತಲೂ ಮುಂದು..!

ಭಾರತದಲ್ಲಿ ಕೊರೋನಾ ಮಹಾಮಾರಿಯ ಅಬ್ಬರ ತೀವ್ರಗೊಂಡಿದ್ದು ವಿಶ್ವದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಭಾರತದ ಸ್ಥಾನ ಆರರಿಂದ ಐದಕ್ಕೆ ಏರಿಕೆ ಆಗಿದೆ.

ನಿನ್ನೆಯಷ್ಟೇ ಇಟಲಿಯನ್ನು ಹಿಂದಿಕ್ಕಿ ಏಳನೇ ಸ್ಥಾನದಿಂದ ಆರನೇ ಸ್ಥಾನಕ್ಕೇರಿದ ಭಾರತ ಇವತ್ತು ಸ್ಪೇನ್‌ಗಿಂತಲೂ ಅಧಿಕ ಕೊರೋನಾ ಕೇಸ್‌ನೊಂದಿಗೆ ಐದನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ ಎಂದು ಜಾನ್‌ ಹಾಪಿಕನ್ಸ್‌ ವಿಶ್ವವಿದ್ಯಾಲಯ ತಾನು ಕಲೆ ಹಾಕಿರುವ ಅಂಕಿಅಂಶಗಳನ್ನು ಆಧರಿಸಿ ಹೇಳಿದೆ.

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2 ಲಕ್ಷದ 43 ಸಾವಿರದ 733 ಆಗಿದ್ದು, ಸ್ಪೇನ್‌ನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2 ಲಕ್ಷದ 40 ಸಾವಿರದ 978 ಸಂಖ್ಯೆ ಇದೆ.

ಇವತ್ತು ಒಂದೇ ದಿನ ಭಾರತದಲ್ಲಿ 9 ಸಾವಿರದ 887 ಹೊಸ ಕೊರೋನಾ ಕೇಸ್‌ ಪತ್ತೆ ಆಗಿದೆ. ಸತತ ಮೂರು ದಿನ ಭಾರತದಲ್ಲಿ 9 ಸಾವಿರಕ್ಕೂ ಅಧಿಕ ಕೇಸ್‌ ವರದಿ ಆಗಿದೆ.

 

LEAVE A REPLY

Please enter your comment!
Please enter your name here