ಕೊರೋನಾ ಕೇಸ್‌ನಲ್ಲಿ ಇಟಲಿಯನ್ನೇ ಹಿಂದಿಕ್ಕಿದ ಭಾರತ..!

ಕೊರೋನಾ ಕೇಸ್‌ನಲ್ಲಿ ಭಾರತ ವಿಶ್ವದಲ್ಲೇ ಆರನೇ ಸ್ಥಾನಕ್ಕೆ ಏರಿದೆ. ಸದ್ಯದ ಅಂಕಿಅಂಶದ ಪ್ರಕಾರ ಇಟಲಿಗಿಂತಲೂ ಭಾರತದಲ್ಲಿ ಕೊರೋನಾ ಕೇಸ್‌ ಹೆಚ್ಚಿದೆ.

ವರ್ಲ್ಡೋಮೀಟರ್‌ ಪ್ರಕಾರ ಭಾರತದಲ್ಲಿ ಇವತ್ತು ಕೊರೋನಾ ಸೋಂಕಿತರ ಸಂಖ್ಯೆ 2 ಲಕ್ಷದ 35 ಸಾವಿರದ 732. ಇಟಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2 ಲಕ್ಷದ 34 ಸಾವಿರದ 531.

ಆದರೆ ಕೊರೋನಾಗೆ ಬಲಿ ಆದವರ ಸಂಖ್ಯೆಯಲ್ಲಿ ಇಟಲಿ ನಾಲ್ಕನೇ ಸ್ಥಾನದಲ್ಲಿದೆ. ಇಟಲಿಯಲ್ಲಿ ಕೊರೋನಾಗೆ ಸತ್ತವರ ಸಂಖ್ಯೆ 33 ಸಾವಿರದ 771. ಭಾರತದಲ್ಲಿ ಕೊರೋನಾಗೆ ಬಲಿ ಆದವರ ಸಂಖ್ಯೆ 6,637.

ದಿನಾವಾರು ಏರಿಕೆಯಲ್ಲಿ ಭಾರತದಲ್ಲಿ ಅತ್ಯಧಿಕ ಅಂದರೆ 9 ಸಾವಿರದ 19 ಕೇಸ್‌ ವರದಿ ಆಗಿದ್ದರೆ ರಷ್ಯಾ 8, 726 ಮಂದಿ, ಅಮೆರಿಕದಲ್ಲಿ 8,581 ಮಂದಿ ಬ್ರೆಜಿಲ್‌ನಲ್ಲಿ 6,007 ಮಂದಿ, ಇಟಲಿಯಲ್ಲಿ 518 ಹೊಸ ಕೊರೋನಾ ಕೇಸ್‌ ವರದಿ ಆಗಿದೆ.

LEAVE A REPLY

Please enter your comment!
Please enter your name here