ಕೊರೋನಾ ಕುರಿತು ನಾಳೆ ರಾಜ್ಯದ ಮೂಲೆ-ಮೂಲೆಗಳ ಕಾರ್ಯಕರ್ತರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಂವಾದ

ಕೊರೋನಾ ಕುರಿತಂತೆ ಪಕ್ಷದ ಕಾರ್ಯಕರ್ತರೊಂದಿಗೆ ನಾಳೆ ರಾಜ್ಯದ ಕಾಂಗ್ರೆಸ್‌ ಕಾರ್ಯಕರ್ತರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಸಂವಾದ ನಡೆಸಲಿದ್ದಾರೆ.

ನಾಳೆ ಬೆಳಗ್ಗೆ 11.30ಕ್ಕೆ 2 ಸಾವಿರ ಸ್ಥಳಗಳಿಂದ ಝೂಮ್‌ ಮೂಲಕ ವೀಡಿಯೋ ಸಂವಾದ ನಡೆಸಲಿದ್ದಾರೆ. ಪ್ರತಿ ಬ್ಲಾಕ್‌ನಿಂದ ಕನಿಷ್ಠ ಮೂರು ಗ್ರಾಮ ಪಂಚಾಯತಿಗಳಿಂದ ಯುವ ಕಾಂಗ್ರೆಸ್‌ ಘಟಕ, ವಿದ್ಯಾರ್ಥಿ ಕಾಂಗ್ರೆಸ್‌, ಸೇವಾದಳ, ಮಹಿಳಾ ಕಾಂಗ್ರೆಸ್‌ ಮತ್ತು ಡಿಜಿಟಲ್‌ ಯೂತ್‌ ಕಡ್ಡಾಯವಾಗಿ ಭಾಗಿ ಆಗಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ್ರರ ಪ್ರಕಟಣೆ ತಿಳಿಸಿದೆ.

ʻನಾಳೆ ಅಂದರೆ 7 ಜೂನ್ 2020ರ ಭಾನುವಾರದಂದು ಕೊರೋನಾ ಚರ್ಚೆ ನಡೆಸಲು ಉದ್ದೇಶಿಸಿದ್ದೇನೆ. ಕಾಡುವ ಕೊರೋನಾ ಕಾಲದಲ್ಲೂ ನಮ್ಮ ಪಕ್ಷದ ಕಾರ್ಯಕರ್ತರು ಮಾಡಿರುವ ಸೇವಾ ಕಾರ್ಯಗಳು, ರೈತರ ನೆರವಿಗೆ ನಿಂತ ಬಗೆ, ವಲಸೆ ಕಾರ್ಮಿಕರಿಗೆ ಅಗತ್ಯದ ವಾಹನ ಸೌಕರ್ಯ ಕಲ್ಪಿಸಿದ್ದು, ನಮ್ಮ ಹೋರಾಟಕ್ಕೆ ಸರ್ಕಾರವೇ ಮಣಿದಿದ್ದು ಈ ಎಲ್ಲವುಗಳ ಕುರಿತಂತೆ ಚರ್ಚೆ ನಡೆಯಲಿದೆ.

ಅಷ್ಟೇ ಅಲ್ಲದೆ ಕೇಂದ್ರ/ರಾಜ್ಯ ಸರ್ಕಾರಗಳು ಪ್ಯಾಕೇಜ್ ಗಳ ಮೇಲೆ ಪ್ಯಾಕೇಜ್ ಗಳನ್ನು ಘೋಷಿಸಿತು. ಆದರೆ ಅವುಗಳಲ್ಲಿ ಬಹುತೇಕವು ಕಾಗದ ಮೇಲೆ ಉಳಿದಿವೆ. ಈ ಕುರಿತು ಸಹ ವಿವರವಾದ ಚರ್ಚೆಯಾಗಲಿದೆ.

ಕೆಪಿಸಿಸಿ ಕೇಂದ್ರ ಕಚೇರಿಯಿಂದ ನಾನು ಮತ್ತು ನಮ್ಮ ವೀಕ್ಷಕರುಗಳು ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಸಂಪರ್ಕದ ಮೂಲಕ ನೇರವಾಗಿ ಪಾಲ್ಗೊಳ್ಳಲಿದ್ದೇವೆ. ಕೊರೋನಾ ಚರ್ಚೆ ಮೂಲಕ ಸಾರ್ವಜನಿಕರಲ್ಲಿ ಕಾಂಗ್ರೆಸ್ ಪಕ್ಷದ ಬಗೆಗೆ ವಿಶ್ವಾಸ ಮೂಡಿಸಬೇಕಿದೆ.

ಈ ಡಿಜಿಟಲ್ ಕಾರ್ಯಕ್ರಮದಲ್ಲಿ ಜಿಲ್ಲಾ, ತಾಲ್ಲೂಕು ಹಾಗೂ ಬ್ಲಾಕ್ ಮಟ್ಟದ ಕಾಂಗ್ರೆಸ್ ನ ಎಲ್ಲ ವಿಭಾಗಗಳ ಪದಾಧಿಕಾರಿಗಳು ಪಾಲ್ಗೊಂಡು ಯಶಸ್ವಿಗೊಳಿಸುವಿರೆಂದು ನಂಬಿದ್ದೇನೆ ಎಂದು ಡಿಕೆಶಿ ಪಕ್ಷದ ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ.

LEAVE A REPLY

Please enter your comment!
Please enter your name here