ಕೊರೋನಾ ಕಾಯಿಲೆಗೆ ಆರ್ಯುವೇದ ಔಷಧ – ಪ್ರಧಾನಿ ಮೋದಿ ಸರ್ಕಾರದಿಂದ ಅಧ್ಯಯನ ಶುರು

ಕೊರೋನಾ ವೈರಸ್‌ಗೆ ಆರ್ಯುವೇದ ಮದ್ದು ಹುಡುಕುಲು ಹೊರಟಿದೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ. ಕೇಂದ್ರದ ಆಯುಷ್‌ ಸಚಿವಾಲಯದ ಜೊತೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ ಜಂಟಿಯಾಗಿ ಅಧ್ಯಯನ ಆರಂಭಿಸಿವೆ.

ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ತಾಂತ್ರಿಕ ನೆರವು ನೀಡಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಹೇಳಿದ್ದಾರೆ.

ಅಶ್ವಗಂಧ, ಯಶ್ತಿಮದ್ದು, ಗುಡುಪಿ ಪಿಪ್ಪಲಿ ಮತ್ತು ಆಯುಷ್‌-೬೪ ಔಷಧಗಳನ್ನು ಕೊರೋನಾ ತಡೆ ಹೋರಾಟದಲ್ಲಿ ಭಾಗಿ ಆಗಿರುವ ಆರೋಗ್ಯ ಕಾರ್ಯಕರ್ತರಿಗೆ ಪ್ರಾಯೋಗಿಕವಾಗಿ ನೀಡಲಾಗುತ್ತದೆ. ಇವತ್ತಿನಿಂದ ಈ ಪ್ರಾಯೋಗಿಕ ಪರೀಕ್ಷೆ ಆರಂಭವಾಗಿದೆ. ಜೊತೆಗೆ ಹೈರಿಸ್ಕ್‌ ಏರಿಯಾಗಳಲ್ಲಿ ಕೆಲಸ ಮಾಡುತ್ತಿರುವವರಿಗೂ ಈ ಔಷಧಗಳನ್ನು ನೀಡಿ ಪ್ರಯೋಗ ಮಾಡಲಾಗುತ್ತದೆ.

ಭಾರತದಲ್ಲಿ ಕೊರೋನಾ ಕೇಸ್‌ನ ಸಂಖ್ಯೆ ೫೨,೯೫೨ಕ್ಕೆ ಏರಿಕೆ ಆಗಿದ್ದು, ಇಲ್ಲಿಯವರೆಗೆ ೧,೭೮೩ ಮಂದಿ ಸಾವನ್ನಪ್ಪಿದ್ದಾರೆ.

LEAVE A REPLY

Please enter your comment!
Please enter your name here