ಕೊರೋನಾ ಎಫೆಕ್ಟ್.. ಕಲಬುರಗಿಯಲ್ಲಿ ಮದ್ಯ ಮಾರಾಟ ಬಂದ್

ಕಲಬುರಗಿಯಲ್ಲಿ ಕೊರೋನಾ ಸೋಂಕು ಉಲ್ಬಣಿಸಿರುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ಮತ್ತಷ್ಟು ಕಠಿಣ ಕ್ರಮ ಕೈಗೊಂಡಿದೆ. ಕಲಬುರಗಿ ನಗರದಲ್ಲಿ ಸೆಕ್ಷನ್ 133 ಜಾರಿ ಮಾಡಿ ಜಿಲ್ಲಾಧಿಕಾರಿ ಶರತ್ ಆದೇಶ ಹೊರಡಿಸಿದ್ದಾರೆ.

ತುರ್ತು ಮತ್ತು ಅಗತ್ಯ ವಸ್ತುಗಳ ವ್ಯಾಪಾರ ಬಿಟ್ಟು ಉಳಿದೆಲ್ಲಾ ವ್ಯಾಪಾರ ವಹಿವಾಟಿಗೆ ಅವಕಾಶ ಇರಲ್ಲ ಎಂದು ಕಲಬುರಗಿ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಅಲ್ಲದೇ, ಮಾರ್ಚ್ 16ರಿಂದ 8 ದಿನಗಳ ಮದ್ಯ ಮಾರಾಟ ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ. ವೈನ್ ಶಾಪ್, ಬಾರ್ ಗಳು ಬಂದ್ ಆಗಲಿವೆ.

ಈಗಾಗಲೇ ಶಾಪಿಂಗ್ ಮಾಲ್, ಥಿಯೇಟರ್, ಪಾರ್ಕ್‍ಗಳನ್ನು ಬಂದ್ ಮಾಡಲಾಗಿದೆ. ಶಾಲಾ ಕಾಲೇಜು ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ.

LEAVE A REPLY

Please enter your comment!
Please enter your name here