ಕೊರೋನಾ ಎಫೆಕ್ಟ್.. ಇಟಲಿ ಜೈಲುಗಳಲ್ಲಿ ಯುದ್ಧ..!

ಕೊರೋನಾ ಮಾರಿಯ ಆರ್ಭಟದ ಹಿನ್ನೆಲೆಯಲ್ಲಿ ಸಂಪೂರ್ಣ ಸ್ತಬ್ಧವಾಗಿರುವ ಇಟಲಿಯಲ್ಲಿ ಹೊಸ ಸಮಸ್ಯೆ ಶುರುವಾಗಿದೆ. ಇಟಲಿ ಜೈಲುಗಳಲ್ಲಿ ಕೊರೋನಾ ಹಾವಳಿ ಹೆಚ್ಚಿದ್ದು, ಖೈದಿಗಳ ಗುಂಪುಗಳಲ್ಲಿ ದೊಡ್ಡಮಟ್ಟದ ಕದನ ನಡೆಯುತ್ತಿದೆ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ 12 ಖೈದಿಗಳು ಸಾವನ್ನಪ್ಪಿದ್ದಾರೆ.

ನಿಯಮ ಉಲ್ಲಂಘಿಸಿ ಮನೆಯಿಂದ ಹೊರಬಂದವರಿಗೆ 3 ತಿಂಗಳ ಜೈಲು ಶಿಕ್ಷೆ ಅಥವಾ 17 ಸಾವಿರ ದಂಡ ವಿಧಿಸುವ ಎಚ್ಚರಿಕೆಯನ್ನು ಇಟಲಿ ಸರ್ಕಾರ ನೀಡಿದೆ. ಆರು ಕೋಟಿ ಮಂದಿ ಗೃಹ ಬಂಧನದಲ್ಲಿ ಇದ್ದಾರೆ.

ಇದುವರೆಗೂ ಕೊರೋನಾ ವೈರಸ್‍ಗೆ 631 ಮಂದಿ ಬಲಿ ಆಗಿದ್ದಾರೆ. 10,149 ಮಂದಿಗೆ ಸೋಂಕು ವ್ಯಾಪಿಸಿದೆ.

LEAVE A REPLY

Please enter your comment!
Please enter your name here