ಕೊರೋನಾ‌ ಹೆಚ್ಚುತ್ತಿದೆ ಎಲೆಕ್ಷನ್ ಏಕೆ‌‌ ಮುಂದೂಡಲಿಲ್ಲ ; ಎಚ್ ಡಿಕೆ

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತೀವ್ರಗತಿ ಪಡೆಯುತ್ತಿರುವ ಆತಂಕದ ಸಂದರ್ಭ ದಲ್ಲಿಯೂ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗ ಲೋಕಸಭೆ , ವಿಧಾನಸಭೆ ಹಾಗೂ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಏಕೆ ಮುಂದೂಡಲಿಲ್ಲ ಎಂದು ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ .

ಬಿಡದಿ ಸಮೀಪದ ಕೇತಗಾನಹಳ್ಳಿ ತೋಟದ ಮನೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ನಗರಸಭೆ ಚುನಾವಣೆ ಆಕಾಂಕ್ಷಿಗಳ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು , ರಾಜ್ಯ ಸರ್ಕಾರದ ಬೇಜವಾಬ್ದಾರಿ ನಡವಳಿಕೆ ಹಾಗೂ ಅವೈಜ್ಞಾನಿಕ ಕ್ರಮಗಳಿಂದಾಗಿ ಕೊರೋನಾ ಸೋಂಕು ಉಲ್ಬಣಗೊಳ್ಳಲು ಕಾರಣವೆಂದು ಟೀಕಿಸಿದರು . ರಾಜ್ಯ ಸರ್ಕಾರ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಹಲವಾರು ನಿಯಮಗಳನ್ನು ಜಾರಿಗೆ ತಂದಿದೆ . ಹೀಗಿದ್ದರೂ ನಿಯಮಗ ಳನ್ನು ಉಲ್ಲಂಘಿಸಿ ಲೋಕಸಭೆ , ವಿಧಾನಸಭೆ ಹಾಗೂ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರದಲ್ಲಿ ಸಹಸ್ರಾರು ಜನರು ಸೇರುತ್ತಿದ್ದಾರೆ . ಇಂತಹ ಆತಂಕದ ಸಂದರ್ಭದಲ್ಲಿ ಚುನಾವಣೆ ಏಕೆ ಘೋಷಣೆ ಮಾಡಬೇಕಾಗಿತ್ತು ಎಂದು ಪ್ರಶ್ನೆ ಮಾಡಿದರು.

LEAVE A REPLY

Please enter your comment!
Please enter your name here