ಕೊರೋನಾಗೆ ಅದೊಂದೇ ಮದ್ದು.. ಏಮ್ಸ್ ವೈದ್ಯರು ಹೇಳೋದೇನು..?

ಪ್ರಪಂಚವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಕೊರೋವಾ ವೈರಸ್ ಮಹಾಮಾರಿಗೆ ಇದುವರೆಗೆ ಔಷಧಿ ಕಂಡು ಹಿಡಿದಿಲ್ಲ ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಸ್ಪಷ್ಟಪಡಿಸಿದ್ದಾರೆ. ಸದ್ಯ ದೇಶದಲ್ಲಿ ಕೊರೋನಾ ಬಾಧಿತರಾದವರೆಲ್ಲಾ ವಿದೇಶಗಳಿಂದ ಬಂದಿರುವವರೇ ಆಗಿದ್ದಾರೆ. ಜೊತೆಗೆ ಅವರ ಕುಟುಂಬ ಸದಸ್ಯರು, ಆಪ್ತರಿಗೆ ಸೋಂಕು ವ್ಯಾಪಿಸಿದೆ.

ಕೋವಿಡ್-19ಗೆ ನಿರ್ದಿಷ್ಟ ಲಕ್ಷಣಗಳೇನು ಇಲ್ಲ. ಜ್ವರ, ಕೆಮ್ಮು, ಗಂಟಲು ನೋವು, ಶಿತ, ಬಾಡಿಪೇನ್ ಇರುತ್ತದೆ. ಕೆಲವರಲ್ಲಿ ಹೊಟ್ಟೆ ನೋವು, ಡಯ್ಹೇರಿಯಾನಂತಹ ಲಕ್ಷಣಗಳು ಕಂಡುಬರುತ್ತಿವೆ. ಕೊರೋನಾ ವೈರಸ್‍ಗೆ ಔಷಧವಿಲ್ಲ. ಕೊರೋನಾ ತಡೆಯಲು ಇರುವುದು ಒಂದೇ ಮದ್ದು. ಅದು ನಮ್ಮ ಸ್ವಚ್ಛತೆ. ನಾವು ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಕೊರೋನಾ ವೈರಸ್‍ನಿಂದ ತಪ್ಪಿಸಿಕೊಳ್ಳಬಹುದು ಎನ್ನುತ್ತಾರೆ ಡಾ. ರಣದೀಪ್ ಗುಲೇರಿಯಾ.

ಮಾಸಾಹಾರ ಸೇವನೆಯಿಂದ, ಕೋಳಿ ಮೊಟ್ಟೆ ತಿನ್ನುವುದರಿಂದ ಕೊರೋನಾ ಬರುತ್ತದೆ ಎಂಬುದು ವದಂತಿ ಅಷ್ಟೇ. ಯಾರೇ ಬೇಕಿದ್ದರೂ ಮಾಂಸಾಹಾರ ಸೇವನೆ ಮಾಡಬಹುದು. ಇದರಿಂದ ಕೊರೋನಾ ಸೋಂಕು ಹರಡುತ್ತದೆ ಎನ್ನುವುದು ಸುಳ್ಳು ಎಂಬುದನ್ನು ಮತ್ತೊಮ್ಮೆ ಗುಲೇರಿಯಾ ಸ್ಪಷ್ಟಪಡಿಸುತ್ತಾರೆ.

LEAVE A REPLY

Please enter your comment!
Please enter your name here