ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಧಾರ ಅವೈಜ್ಞಾನಿಕ: ಡಿ.ಕೆ ಶಿವಕುಮಾರ್

ಕೊರೊನಾ ಸೋಂಕು ರಾತ್ರಿ ಹೊತ್ತು ಮಾತ್ರ ಹರಡುತ್ತದೆಯೇ? ಹಗಲಲ್ಲಿ ಹರಡುವುದಿಲ್ಲವೇ? ಸರ್ಕಾರದ ನೈಟ್ ಕರ್ಫ್ಯು ನಿರ್ಧಾರ ಅವೈಜ್ಞಾನಿಕ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಬಸವಕಲ್ಯಾಣದಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಶನಿವಾರ ಮಧ್ಯಾಹ್ನ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ ಅವರು ಹೇಳಿದ್ದಿಷ್ಟು:

‘ಕೊರೊನಾ ಸೋಂಕು ಹಗಲು ವೇಳೆ ಹರಡುವುದಿಲ್ಲ ರಾತ್ರಿ ಮಾತ್ರ ಹರಡುತ್ತದೆ ಅಂತಾ ಅದ್ಯಾವ ವಿಜ್ಞಾನಿ ಹೇಳಿದ ಎಂದು ನಮಗೂ ಹೇಳಿದರೆ ನಾವು ಅವರ ಫೋಟೋ ಹಾಕೊಂಡು ಇಟ್ಟುಕೊಳ್ಳುತ್ತೇವೆ.

ರಾತ್ರಿವೇಳೆ ಎಲ್ಲಿ ಜನ ಸೇರುತ್ತಾರೆ? ರಾತ್ರಿ ವೇಳೆ ಜನ ಕಡಿಮೆ ಆಗುತ್ತಾರೆ. ಈ ಸಮಯದಲ್ಲಿ ಕರ್ಫ್ಯೂ ಹೇರಿ ಆರ್ಥಿಕತೆಯನ್ನು ಹಾಲು ಮಾಡುತ್ತಿದ್ದಾರೆ.

ಮಾನಸಿಕವಾಗಿ ಕುಗ್ಗಿಸುತ್ತಿದ್ದಾರೆ. ರಾತ್ರಿ ವೇಳೆ ಓಡಾಡುವ ರೈಲು, ವಿಮಾನ ನಿಲ್ಲಿಸುತ್ತೀರಾ? ಇದೆಲ್ಲವೂ ಅವೈಜ್ಞಾನಿಕ. ಇದು ಯಾವ ಸಂದೇಶ ಅಂತಾ ನೀವು ಸರ್ಕಾರವನ್ನು ಕೇಳಬೇಕು.

ಇದೇ ಕಾರಣಕ್ಕೆ ಈ ಸರ್ಕಾರವನ್ನು ಜನ ಕಿತ್ತು ಹಾಕಬೇಕು. ಮೂರು ಉಪಚುನಾವಣೆಯಲ್ಲಿ ಇವರ ವಿರುದ್ಧ ಮತ ಹಾಕಬೇಕು ಆಗ ಇವರಿಗೆ ಬುದ್ಧಿ ಬರುತ್ತದೆ.’

LEAVE A REPLY

Please enter your comment!
Please enter your name here