ಕೊರೊನಾ ಲಾಕ್‍ಡೌನ್‌ ನಿಂದ ಮತ್ತೆ ಮರುಕಳಿಸಿದ ಸಿಲಿಕಾನ್‌ ಸಿಟಿಯ ಚೆಲುವು

ಕೊರೊನಾ ಸೃಷ್ಟಿಸಿದ ಲಾಕ್ ಡೌನ್ ಸನ್ನಿವೇಶ ಮನುಷ್ಯರ ಮೇಲಷ್ಟೇ ಅಲ್ಲ ಪರಿಸರದ ಮೇಲೂ ಪ್ರಭಾವ ಬೀರಿದೆ,ಹೌದು ಸದಾ ಓಡಾಡುತ್ತಿದ್ದ ವಾಹನಗಳು, ಕಿಕ್ಕಿರಿದ ಜನಸಂದಣಿಯಿಂದ ತುಂಬಿದ್ದ ಸಿಲಿಕಾನ್‌ ಸಿಟಿ ಈಗ ನೋಡುಗರ ಕಣ್ಮನ ಸೂರೆಗೊಳ್ಳುತ್ತಿದೆ.

ಈ ಹಿಂದೆ ನಿತ್ಯ ಓಡಾಡುತ್ತಿದ್ದ ಲಕ್ಷಾಂತರ ವಾಹನಗಳ ಹೊಗೆಯಿಂದ ಮಲಿನಗೊಂಡು ಧೂಳಿನಿಂದ ತುಂಬಿರುತ್ತಿದ್ದ ಗಿಡ ಮರಗಳು ಮೊನ್ನೆ ಸುರಿದ ಮಳೆಗೆ ಮೈ ತೊಳೆದುಕೊಂಡು ಬಣ್ಣಬಣ್ಣದ ಉಡುಗೆಯುಟ್ಟು ಮದುವಣಗಿತ್ತಿಯಂತೆ ತಮ್ಮನ್ನು ತಾವೇ ಸಿಂಗರಿಸಿಕೊಂಡಿವೆ.

ಹೌದು, ಬೆಳ್ಳಕ್ಕಿಯಂತೆ ಗಿಡದ ಮೇಲೆ ಕುಳಿತಂತೆ ನಳನಳಿಸುತ್ತಿರುವ ಟಬೂಬಿಯಾ ಅರ್ಜೆನ್ಷಿಯಾ ಹೂಗಳ ಅಂದ ಈ ನೈಸರ್ಗಿಕ ಸೊಬಗಿಗೆ ಮತ್ತಷ್ಟು ರಂಗು ಬಂದಂತಾಗಿದ್ದು ಮಹಾನಗರಿ ಬೆಂಗಳೂರಿನಲ್ಲಿ ಕೊರೊನಾ ಲಾಕ್ಡೌನ್‌ ನಂತರ!

ರಾಜಧಾನಿಯ ರಸ್ತೆಯ ಇಕ್ಕೆಲಗಳಲ್ಲಿ ಇರುವ ಮರಗಳು ಈಗ ಮದುವೆಯ ಹಬ್ಬಕ್ಕೆ ತಯಾರಾದಂತೆ ಭಾಸವಾಗುತ್ತಿದೆ. ಹಳದಿ ಹೂಗಳಿಂದ ತುಂಬಿದ ಮರವು ಆಗತಾನೇ ಅರಿಶಿಣದ ಶಾಸ್ತ್ರ ಮುಗಿಸಿ ಫೋಟೋ ಸೆಷನ್ ಆರಂಭಿಸಿವೆ. ಇನ್ನು ಕೆಂಪು ಹೂಗಳ ನಡುವೆ ಅಲ್ಲಲ್ಲಿ ಕಾಣುವ ಹಸಿರೆಲೆಗಳು ಮದರಂಗಿಯಲ್ಲಿ ಮದುವೆಯ ರಂಗು ಮೂಡಿವೆ ಎಂದು ಹಾಡಿ ತಂಗಾಳಿಗೆ ಮೈಯೊಡ್ಡಿವೆ.

ಹೀಗೆ ಒಂದೊಂದು ಒಂದೊಂದು ರೀತಿ ಚೆಲುವ ಬೀರುವಾಗ ಬೆಂಗಳೂರು ಸದಾಕಾಲ ಹೀಗೆಯೇ ಇರಬಾರದೇ ಎನ್ನಿಸದಿರದು. ಬಹುಷ ಈ ಸೌಂದರ್ಯ ನಮಗೆ ಸಿಗಬೇಕೆಂದರೆ ಆಗಾಗ ಲಾಕ್ ಡೌನ್ ಮಾಡಲೇ ಬೇಕಾಗಬಹುದು.

ನಗರದ ಹಲವು ರಸ್ತೆ ಬದಿಗಳಲ್ಲೂ ಕಂಗೊಳಿಸುತ್ತಿರುವ ಈ ಹೂವುಗಳ ಸೊಬಗು ನೋಡುಗರ ಮನಸ್ಸನ್ನು ಆಹ್ಲಾದಗೊಳಿಸುತ್ತಿವೆ.

ತಿಳಿ ಗುಲಾಬಿ ಬಣ್ಣದ ಟಬೂಬಿಯಾ ರೋಜಿಯಾ ಹೂವುಗಳು ಅರಳಿದ್ದು, ಬೆಂಗಳೂರಿನ ಸೌಂದರ್ಯವನ್ನು ಇಮ್ಮಡಿಸಿವೆ

ಇಸ್ಕಾನ್‌ ದೇವಸ್ಥಾನದಿಂದ ಕಾಣುತ್ತಿರುವ ವಿಹಂಗಮ ನೋಟ

LEAVE A REPLY

Please enter your comment!
Please enter your name here