ಕೊರೊನಾಗೆ ವೆಲ್‍ಕಮ್ ಹೇಳಿ ಛೀಮಾರಿ ಹಾಕಿಸಿಕೊಂಡ ಖ್ಯಾತ ನಟಿ..!

ಕೆಲವರಿಗೆ ಕಂಡಕಂಡಿದ್ದಕ್ಕೆಲ್ಲಾ ಕಾಮೆಂಟ್ ಹಾಕುತ್ತಾ ಸುದ್ದಿಯಲ್ಲಿರೋದು ಖಯಾಲಿ. ವಿಚಾರದ ಗಂಭಿರತೆ ಅರಿಯದೇ ಸ್ಟೇಟ್‍ಮೆಂಟ್ ಕೊಟ್ಟು ವಿವಾದಕ್ಕೆ ಸಿಲುಕೋದು.. ನಂತರ ಕ್ಷಮೆ ಕೇಳೋದು ಇತ್ತೀಚಿಗೆ ಕಾಮನ್ ಆಗ್ಬಿಟ್ಟಿದೆ. ಇದೀಗ ಅದೇ ಸಾಲಿಗೆ ಸೇರುತ್ತಾರೆ ಅಂತಾ ಕಾಣುತ್ತೆ ಟಾಲಿವುಡ್‍ನ ಖ್ಯಾತ ನಟಿ ಚಾರ್ಮಿ ಕೌರ್.

ತೆಲಂಗಾಣ ಮೂಲದ ಬೆಂಗಳೂರು ಟೆಕ್ಕಿಗೆ ಕೊರೊನಾ ವೈರಸ್ ಸೋಕಿದ ಸುದ್ದಿ ಕೇಳಿ ನಟಿ ಚಾರ್ಮಿ ಕೌರ್‍ಗೆ ಏನಾಯ್ತೋ ಏನೋ..? ತಕ್ಷಣ ಕ್ಯಾಮೆರಾ ಮುಂದೆ ಬಂದ ನಟಿ ಚಾರ್ಮಿ ಕೌರ್, ಏನೋ ದೊಡ್ಡ ವಿಜಯ ಸಾಧಿಸಿದ ರೀತಿ, ಕೊರೊನಾಗೆ ವೆಲ್‍ಕಮ್ ಹೇಳಿದ್ದಾರೆ. ಆಲ್ ದಿ ಬೆಸ್ಟ್ ಹೇಳಿದ್ದಾರೆ. ಅಷ್ಟೇ ಅಲ್ಲ, ಅದನ್ನು ಟ್ವಿಟ್ಟರ್ ಅಕೌಂಟ್‍ನಲ್ಲಿ ಪೋಸ್ಟ್ ಬೇರೆ ಮಾಡಿದ್ದಾರೆ.

ನೆಟ್ಟಿಗರಿಂದ ನಂತರ ಶುರುವಾಯ್ತು ನೋಡಿ ಛೀಮಾರಿ ಹಾಕೋದು.. ವೆಲ್‍ಕಮ್ ಹೇಳೊದಕ್ಕೆ ಇದೇನು ಒಳ್ಳೆಯದಾ..? ಚಾರ್ಮಿ ಮೈಂಡ್ ಕೆಟ್ಟೋಗಿದೆ.. ನಿಮಗೆ ಮಾನವೀಯತೆ ಇಲ್ವಾ..? ಸಾಧ್ಯ ಆದ್ರೆ ಸಹಾಯ ಮಾಡಿ, ಅದು ಬಿಟ್ಟು ಹೀಗೆಲ್ಲ ಮಾತನಾಡೋದು ಎಷ್ಟು ಸರಿ ಅಂತಾ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಈ ಬೆನ್ನಲ್ಲೇ ಎದ್ನೋ ಬಿದ್ನೋ ಟ್ವೀಟ್ ವಿಡಿಯೋ ಡಿಲೀಟ್ ಮಾಡಿದ ನಟಿ ಚಾರ್ಮಿ ಕೌರ್, ನನ್ನಿಂದ ತಪ್ಪಾಗಿದೆ ಕ್ಷಮಿಸಿಬಿಡಿ.. ಕೊರೊನಾ ಗಂಭೀರತೆ ಅರಿಯದೇ ವಿಡಿಯೋ ಪೊಸ್ಟ್ ಮಾಡಿದ್ದೇ. ಸೂಕ್ಷ್ಮ ವಿಚಾರದಲ್ಲಿ ಅಪ್ರಬುದ್ಧತೆ ಮೆರೆದಿದ್ದೇನೆ. ಇದರಿಂದ ನಾನು ಪಾಠ ಕಲಿತಿದ್ದೇನೆ. ಮುಂದೆ ಯಾವುದೇ ವಿಚಾರದ ಬಗ್ಗೆ ಪ್ರತಿಕ್ರಿಯಿಸುವಾಗ ಎಲ್ಲವನ್ನು ತಿಳಿದುಕೊಂಡೇ ಮಾತನಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here