ಕೊನೆಯದಾಗಿ ಒಮ್ಮೆ ನೋಡ್ಬಿಡಿ.. ಮತ್ತೆ ಸಿಗಲ್ಲ ಚಾನ್ಸ್..!

ನಿರ್ಭಯ ಹತ್ಯಾಚಾರದ ದೋಷಿಗಳನ್ನು ಗಲ್ಲು ಹಾಕಲು ಕೌಂಟ್‍ಡೌನ್ ಶುರುವಾಗಿದೆ. ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಲಿರುವ ಹಿನ್ನೆಲೆಯಲ್ಲಿ ಅವರನ್ನು ಹೈ ಸೆಕ್ಯೂರಿಟಿ ಇರುವ ಕೊಠಡಿಗಳಿಗೆ ತೆರಳಿಸಲಾಗಿದೆ. ದಿನದ 24 ಗಂಟೆಯೂ ಮೂವರು ಜೈಲ್ ಗಾರ್ಡ್‍ಗಳ ಕಣ್ಗಾವಲಿನಲ್ಲಿ ಪವನ್ ಗುಪ್ತಾ, ಅಕ್ಷಯ, ವಿನಯ್ ಶರ್ಮಾ ಮತ್ತು ಮುಖೇಶ್ ಇದ್ದಾರೆ.

ಇತರೆ ಕೈದಿಗಳ ಮಾದರಿಯಲ್ಲಿ ನಿರ್ಭಯ ದೋಷಿಗಳು ಕೂಡ ವಾರದಲ್ಲಿ ಎರಡು ಬಾರಿ ಕುಟುಂಬ ಸದಸ್ಯರನ್ನು ಭೇಟಿ ಮಾಡಬಹುದು ಎನ್ನುವುದು ಜೈಲಿನ ನಿಯಮ.ಆದರೆ, ನಿರ್ಭಯ ಅಪರಾಧಿಗಳಿಗೆ ಕೋರ್ಟ್ ಡೆತ್ ವಾರೆಂಟ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಕೊನೆಯಬಾರಿ ದೋಷಿಗಳ ಭೇಟಿ ಮಾಡಲು ಅವರ ಕುಟುಂಬ ಸದಸ್ಯರಿಗೆ ಜೈಲು ಅಧಿಕಾರಿಗಳು ಅನುಮತಿ ನೀಡಿದ್ದಾರೆ.

ಕೊನೆ ಕ್ಷಣದ ಮ್ಯಾಜಿಕ್ ನಿರೀಕ್ಷೆಯಲ್ಲಿ ಗಲ್ಲಿಗೆ ಏರುವವರು;

ಜನವರಿ22ರಂದು ಬೆಳಗ್ಗೆ ಗಲ್ಲು ಏರುತ್ತೇವೆ ಎಂದು ಅಪರಾಧಿಗಳಿಗೆ ತಿಳಿದಿದೆ. ಆದರೂ, ಅವರಲ್ಲಿ ಆತಂಕ, ದುಗುಡ ಕಾಣುತ್ತಿಲ್ಲ. ಸಹಜವಾಗಿ ವರ್ತಿಸುತ್ತಿದ್ದಾರೆ. ಕೊನೆ ಕ್ಷಣದಲ್ಲಿ ಗಲ್ಲು ತಪ್ಪುತ್ತದೆ ಎಂಬ ಭರವಸೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಸಾವಿನ ವಿಚಾರದಲ್ಲಿ ಅವರು ನಿರ್ಲಿಪ್ತರಾಗಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ತಿಹಾರ್ ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡು ದಿನದಲ್ಲಿ ತಿಹಾರ್ ಜೈಲಿಗೆ ವಧಾಕಾರ;

ನಿರ್ಭಯ ಹತ್ಯಾಚಾರ ಎಸಗಿದ ನಾಲ್ವರು ದೋಷಿಗಳನ್ನು ಗಲ್ಲಿಗೇರಿಸುವುದು ವಧಾಕಾರ ಪವನ್ ಕುಮಾರ್ ಜಲ್ಲಾದ್. ಇನ್ನು ಎರಡು ದಿನಗಳಲ್ಲಿ ಉತ್ತರ ಪ್ರದೇಶದ ಮೀರತ್ ಜೈಲಿನ ವಧಾಕಾರ ಪವನ್ ಕುಮಾರ್ ಜಲ್ಲಾದ್ ತಿಹಾರ್ ಜೈಲಿಗೆ ಭೇಟಿ ನೀಡಿ ಗಲ್ಲು ಶಿಕ್ಷೆಯ ತಯಾರಿಗಳನ್ನು ಪರಿಶೀಲಿಸಲಿದ್ದಾರೆ.

ಮರಳು ಚೀಲಗಳಿಂದ ಪ್ರಾಕ್ಟೀಸ್ ಶುರು

ಭಾನುವಾರದಿಂದ ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆಯ ಪ್ರಾಕ್ಟೀಸ್ ಶುರುವಾಗಿದೆ. ಅಪರಾಧಿಗಳ ತೂಕದಷ್ಟು ಮರಳಿನ ಚೀಲಗಳನ್ನು ಗಲ್ಲಿಗೆ ಹಾಕಿ, ಎಲ್ಲಾ ಸರಿಯಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ.

ನಿರ್ಭಯಾ ಅತ್ಯಾಚಾರಿಗಳ ಗಲ್ಲು ಶಿಕ್ಷೆಗೆ ಮುಹೂರ್ತ ಫಿಕ್ಸ್‌, ಗಲ್ಲು ಶಿಕ್ಷೆ ಹೇಗೆ ಕೊಡ್ತಾರೆ? ಪಿನ್‌ ಟು ಪಿನ್‌ ಮಾಹಿತಿ ಇಲ್ಲಿದೆ

LEAVE A REPLY

Please enter your comment!
Please enter your name here