ಕೊನೆಗೂ ಸಿಕ್ಕಿತು ಬರೇಲಿ ಬಜಾರಿನಲ್ಲಿ ಕಳೆದು ಹೋಗಿದ್ದ ಜುಮ್ಕಿ…!

ಜುಮ್ಕಾ ಗಿರಾ ರೇ ಹಾಯ್….ಜುಮ್ಕಾ ಗಿರಾ ರೇ…ಬರೇಲೀ ಕೆ ಬಾಜಾರ್‌ ಮೆ ಹಾಡಿಗೆ ಮನಸೂರೆಗೊಳ್ಳದವರು ಯಾರಿಲ್ಲ ಹೇಳಿ? ಹೌದು 1966 ರಲ್ಲಿ ಆಶಾ ಬೋಸ್ಲೆ ಹಾಡಿದ ಈ ಹಾಡು ತುಂಬಾ ಪ್ರಸಿದ್ಧಿಯಾಗಿತ್ತು.

ಹಲವಾರು ದಶಕಗಳಿಂದ ಬರೇಲಿ ಜನರ ಕಾಯುವಿಕೆಗೆ ಕಳೆದ ವಾರವಷ್ಟೇ ತೆರೆಬಿದ್ದಿದೆ. 2 ಕ್ವಿಂಟಾಲ್‌ ತೂಕದ ಈ ಬೃಹತ್‌ ಗಾತ್ರದ ಜುಮ್ಕಿಯನ್ನು ಬರೇಲಿಯ ಪರಸಕೇರಾದ ನ್ಯಾಷನಲ್‌ ಹೈವೇ 24 ರಲ್ಲಿರುವ ಝೀರೋ ಪಾಯಿಂಟ್ ನಲ್ಲಿ ಕೇಂದ್ರ ಸಚಿವ ಸಂತೋಷ್‌ ಗಂಗ್ವಾರ್‌ ಉದ್ಘಾಟಿಸಿದ್ದಾರೆ.

ಕಂದು ಬಣ್ಣದ ಮತ್ತು ಹೊಳೆಯುವ ಹಳದಿ ಬಣ್ಣ ಹೋಂದಿರುವ  ಈ ಜುಮ್ಕಿಗೆ ಕೊಕ್ಕೆ ಹಾಕಲಾಗಿದ್ದು, 20 ಅಡಿ ಎತ್ತರದ ಚಿನ್ನದ ಡ್ಯಾಂಗ್ಲರ್ ಎಂಟು ಅಡಿ ವ್ಯಾಸವನ್ನು ಹೊಂದಿದೆ ಮತ್ತು ಲೋಹಕ್ಕೆ ಹೆಸರುವಾಸಿಯಾದ ಮೊರಾದಾಬಾದ್‌ನಲ್ಲಿ ಹಿತ್ತಾಳೆಯಲ್ಲಿ ಹಾಕಲಾಯಿತು. ಇದನ್ನು ಗುರುಗ್ರಾಮ್‌ನ ಕಲಾವಿದರೊಬ್ಬರು ವಿನ್ಯಾಸಗೊಳಿಸಿದ್ದಾರೆ. ಯೋಜನೆಯ ವೆಚ್ಚವನ್ನು ಬಹಿರಂಗಪಡಿಸಲು ಬಿಡಿಎ ಅಧಿಕಾರಿಗಳು ಸಿದ್ಧರಿಲ್ಲವಾದರೂ, ಯೋಜನೆಗೆ ಆಕಾರ ನೀಡಲು 60 ಲಕ್ಷ ರೂ ವೆಚ್ಚ ತಗುಲಿರಬಹುದೆಂದು ಅಂದಾಜಿಸಲಾಗಿದೆ.

ಹಾಗಿದ್ದರೆ ನೀವು ಯಾವತ್ತಾದರೂ ಬರೇಲಿಗೆ ಭೇಟಿ ನೀಡುವಾಗ ಈ ಜುಮ್ಕಾದ ಕೆಳಗೆ ಸೆಲ್ಫಿ ಕ್ಲಿಕ್ಕಿಸಲು ಮರೆಯದಿರಿ.

LEAVE A REPLY

Please enter your comment!
Please enter your name here