ನಾನು ಗಿಡ ನೆಟ್ಟಿದ್ದೇನೆ.. ನನ್ನ ಅಭಿಮಾನಿಗಳಾದ ನೀವುಗಳು ಈ ಒಳ್ಳೇ ಕೆಲಸದಲ್ಲಿ ಭಾಗಿಯಾಗಿ.. ಎಂದು ನಟಿ ರಷ್ಮಿಕಾ ಮಂದಣ್ಣ ಕರೆ ನೀಡಿದ್ದಾರೆ.
ಗಿಡ ನೆಡಿ ಎಂದು ರಾಜ್ಯಸಭಾ ಸದಸ್ಯ ಜೋಗಿನಪಲ್ಲಿ ಸಂತೋಷ್ ಕುಮಾರ್ ಪ್ರಾರಂಭಿಸಿದ ಗ್ರೀನ್ ಇಂಡಿಯಾ ಚಾಲೆಂಜ್ ಭಾಗವಾಗಿ ನಟಿ ಸಮಂತಾ ನೀಡಿದ್ದ ಸವಾಲನ್ನು ಸ್ವೀಕರಿಸಿದ ನಟಿ ರಷ್ಮಿಕಾ ಮನೆಯಂಗಳದಲ್ಲಿ ಖುದ್ದಾಗಿ ಗಿಡ ನೆಟ್ಟು ಸಂಭ್ರಮಿಸಿದ್ದಾರೆ. ಈ ಹಸಿರು ಸಂಭ್ರಮದಲ್ಲಿ ನೀವು ಕೂಡ ಭಾಗಿ ಎಂದು ಕರೆ ನೀಡಿದ್ದಾರೆ.

ಗಿಡ ನೆಟ್ಟ ಬಳಿಕ ಫೋಟೋ ತೆಗೆಯಲು ಪಟ್ಟ ಕಷ್ಟವನ್ನು ಇನ್ಸ್ಟಾಗ್ರಾಮ್ನಲ್ಲಿ ರಷ್ಮಿಕಾ ಹಂಚಿಕೊಂಡಿದ್ದಾರೆ.
ಇದೇ ವೇಳೆ ಗ್ರೀನ್ ಇಂಡಿಯಾ ಚಾಲೆಂಜ್ ಅನ್ನು ನಟಿಯರಾದ ರಾಶಿ ಖನ್ನಾ, ಕಲ್ಯಾಣಿ ಪ್ರಿಯದರ್ಶನ್ ಮತ್ತು ಆಶಿಕಾ ರಂಗನಾಥ್ ರನ್ನು ರಷ್ಮಿಕಾ ನಾಮಿನೇಟ್ ಮಾಡಿದ್ದಾರೆ.
ಒಬ್ಬೊಬ್ಬರು ಮೂರು ಗಿಡ ನೆಟ್ಟು ಗ್ರೀನ್ ಇಂಡಿಯಾ ಚಾಲೆಂಜ್ ಅನ್ನು ಮುಂದಕ್ಕೆ ಕೊಂಡೊಯ್ಯಲು ಮನವಿ ಮಾಡಿದ್ದಾರೆ.