ಕೇರಳದಲ್ಲಿ ಲವ್‌ ಜೆಹಾದ್‌ ಪ್ರಕರಣ ವರದಿ ಆಗಿಲ್ಲ – ಪ್ರಧಾನಿ ಮೋದಿ ಸರ್ಕಾರದ ಸ್ಪಷ್ಟನೆ

ಕೇರಳದಲ್ಲಿ ಲವ್‌ ಜೆಹಾದ್‌ ಪ್ರಕರಣಗಳು ವರದಿ ಆಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಲೋಕಸಭೆಯಲ್ಲಿ ಹೇಳಿಕೆ ನೀಡಿದೆ.

ಕೇಳಿದ ಪ್ರಶ್ನೆಗಳು:

೧) ಕೇರಳದಲ್ಲಿ ಲವ್‌ ಜೆಹಾದ್‌ ಪ್ರಕರಣಗಳು ಇಲ್ಲ ಎಂದು ಕೇರಳ ಹೈಕೋರ್ಟ್‌ ವ್ಯಕ್ತಪಡಿಸಿದ್ದ ಅಭಿಪ್ರಾಯದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ಇದ್ಯಾ..?

೨) ಒಂದು ವೇಳೆ ಇದ್ದರೆ ಆ ಬಗ್ಗೆ ಮಾಹಿತಿ ಏನಿದೆ..?

೩) ಎರಡು ವರ್ಷದಲ್ಲಿ ಕೇಂದ್ರ ಸರ್ಕಾರದ ಸಂಸ್ಥೆಗಳು ಕೇರಳದಲ್ಲಿ ಯಾವುದಾದರೂ ಲವ್‌ ಜೆಹಾದ್‌ ಪ್ರಕರಣಗಳ ಬಗ್ಗೆ ವರದಿ ಮಾಡಿವೆಯಾ..? ಒಂದು ವೇಳೆ ಹೌದು ಎಂದಾದರೆ ವಿವರ ಏನಿದೆ..?

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ ಕಿಶನ್‌ ರೆಡ್ಡಿ ಕೊಟ್ಟ ಉತ್ತರ:

೧) ಸಂವಿಧಾನದ ೨೫ನೇ ವಿಧಿ ಪ್ರಕಾರ ತಾವು ಇಚ್ಛಿಸಿದ ಧರ್ಮ ಮತ್ತು ನಂಬಿಕೆಗಳನ್ನು ಆಚರಿಸಲು ಸ್ವಾತಂತ್ರ್ಯ ನೀಡಿದೆ. ಈ ಅಭಿಪ್ರಾಯವನ್ನು ಕೇರಳ ಹೈಕೋರ್ಟ್‌ ಸೇರಿದಂತೆ ಹಲವು ಕೋರ್ಟ್‌ಗಳು ಎತ್ತಿ ಹಿಡಿದಿವೆ. ಲವ್‌ ಜೆಹಾದ್‌ ಎಂಬ ಬಗ್ಗೆ ಕಾನೂನಿನಲ್ಲಿ ಯಾವುದೇ ವ್ಯಾಖ್ಯಾನಗಳಿಲ್ಲ. ಕೇಂದ್ರ ಸರ್ಕಾರದ ಏಜೆನ್ಸಿಗಳು ಲವ್‌ ಜೆಹಾದ್‌ ಬಗ್ಗೆ ವರದಿ ಮಾಡಿಲ್ಲ. ಆದರೆ ಎರಡು ಅಂತರ್‌ಧರ್ಮಿಯ ಮದುವೆಗಳ ಬಗ್ಗೆ ರಾಷ್ಟ್ರೀಯ ತನಿಖಾ ದಳ ಎನ್‌ಐಎ ತನಿಖೆ ನಡೆಸಿತ್ತು.

 

LEAVE A REPLY

Please enter your comment!
Please enter your name here