ಕೇರಳದಲ್ಲಿ ಯಡಿಯೂರಪ್ಪ ಮುತ್ತಿಗೆ – ಬೆಂಗಳೂರಲ್ಲಿ ಸಿಪಿಐ ಪಕ್ಷದ ಕಚೇರಿಗೆ ಬೆಂಕಿ – ವಿಡಿಯೋ ನೋಡಿ


ಬೆಂಗಳೂರಿನ ವೈಯಾಲಿಕಾವಲ್ ನಲ್ಲಿರುವ ಸಿಪಿಐ ಪಕ್ಷದ ಕಚೇರಿಗೆ ಮಧ್ಯರಾತ್ರಿ ಒಂದು ಗಂಟೆಗೆ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದಾರೆ.

ಕಚೇರಿಯ ಆವರಣದೊಳಗೆ ನುಗ್ಗಿದ ಇಬ್ಬರು ಕಿಡಿಗೇಡಿಗಳ ಲ್ಲಿ ಒಬ್ಬಾತ ತನ್ನ ಕೈಯಲ್ಲಿದ್ದ ಬಾಟಲಿನಿಂದ ಬಾಗಿಲಿಗೆ ಪೆಟ್ರೋಲ್ ಎರಚಿದ್ದಾನೆ. ಬಳಿಕ ಪಕ್ಕದಲ್ಲಿದ್ದ ಬೈಕುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಓಡಿ ಬಂದಿದ್ದಾನೆ.

 

ನಿನ್ನೆ ಮತ್ತು ಮೊನ್ನೆ ರಾತ್ರಿ ಕೇರಳ ಪ್ರವಾಸ ಕೈಗೊಂಡಿದ್ದ ಬೇಳೆ ಮುಖ್ಯಮಂತ್ರಿ ಯಡಿಯೂರಪ್ಪನವರ ಕಾರಿಗೆ ಡಿವೈಎಫ್ಐ ಮತ್ತು ಎಸ್ಎಫ್ಐ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಈ ಮುತ್ತಿಗೆಗೆ ಸಿಪಿಐ ಕಚೇರಿಗೆ ಬೆಂಕಿ ಹಾಕಿದ್ದಕ್ಕೂ ಸಂಬಂಧ ಇದೆ ಸಂಶಯವಿದೆ.

ಇದು ಆರೆಸ್ಸೆಸ್ ಕಾರ್ಯಕರ್ತರು ಕೃತ್ಯ ಎಂದು ಖಂಡಿಸಿ ಬೆಂಗಳೂರಿನ ಕುವೆಂಪು ವೃತ್ತದಲ್ಲಿ ಸಿಪಿಐ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸಿದ್ದರಾಮಯ್ಯ ಖಂಡನೆ:

ಬೆಂಗಳೂರಿನ ಸಿಪಿಐ ಕಚೇರಿಗೆ ಬೆಂಕಿ ಹಚ್ಚಿರುವುದು ಸೈದ್ಧಾಂತಿಕ ವಿರೋಧಿಗಳನ್ನು ರಾಜಕೀಯವಾಗಿ ಎದುರಿಸಲಾಗದವರ ಹತಾಶ ಪ್ರಯತ್ನ.  ಈಕೃತ್ಯ ಎಸಗಿದ ದುಷ್ಕರ್ಮಿಗಳು ಮತ್ತು ಅವರಿಗೆ ಪ್ರಚೋದನೆ ನೀಡಿರುವ ದುಷ್ಟರನ್ನುಪ ಹಚ್ಚಿ ತಕ್ಷಣ ಬಂಧಿಸಬೇಕೆಂದು ಮುಖ್ಯಮಂತ್ರಿ @BSYBJP ಅವರನ್ನು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

 

LEAVE A REPLY

Please enter your comment!
Please enter your name here