ಡಿಸೆಂಬರ್‌ ವೇಳೆಗೆ ಉಚಿತ ಇಂಟರ್‌ನೆಟ್‌ : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್

ಬಡವರಿಗೆ ಉಚಿತ ಇಂಟರ್ನೆಟ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೇರಳ ನಾಗರಿಕರಿಗೆ ಉಚಿತ ಇಂಟರ್‌ನೆಟ್‌ ಕೊಡಲು ಮುಂದಾಗಿದೆ. ಕೇರಳ ಫೈಬರ್ ಆಪ್ಟಿಕ್ ನೆಟ್ವರ್ಕ್ ಯೋಜನೆಗೆ Kerala Fibre Optic Network (K-FON) ಈ ವರ್ಷದ ಡಿಸೆಂಬರ್‌ನಲ್ಲಿ ಚಾಲನೆ ಸಿಗಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಈ ಯೋಜನೆಯ ಪ್ರಕಾರ ಕೇರಳದ ಬಡವರಿಗೆ ಉಚಿತ ಇಂಟರ್‌ನೆಟ್ ಒದಗಿಸಲಾಗುತ್ತದೆ. ಮಧ್ಯಮ ವರ್ಗದವರಿಗೆ ಅತ್ಯಂತ ಕಡಿಮೆ ದರದಲ್ಲಿ ಇಂಟರ್‌ನೆಟ್ ಒದಗಿಸಲಾಗುತ್ತದೆ.

ಕೇರಳ ಜಾರಿಗೆ ತರಲು ಹೊರಟಿರುವ ಈ ಯೋಜನೆಗೆ 1500 ಕೋಟಿ ರೂಪಾಯಿಯನ್ನು ತೆಗೆದಿರಿಸಿದ್ದು ರಾಜ್ಯದ ಎಲ್ಲ ಹಳ್ಳಿಗಳಿಗೂ ಈ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.‌

ದೇಶದಲ್ಲೇ ಮೊದಲು

ತನ್ನ ನಾಗರಿಕರಿಗೆ ಉಚಿತ ಇಂಟರ್‌ನೆಟ್ ಒದಗಿಸುತ್ತಿರುವ ಕೇರಳ ಸರ್ಕಾರದ ನಿರ್ಧಾರ ದೇಶದಲ್ಲೇ ಮೊದಲು ಎನಿಸಿಕೊಂಡಿದೆ. ಯಾವುದೇ ರಾಜ್ಯಗಳು ಇದುವರೆಗೆ ಸರ್ಕಾರದಿಂದಲೇ ಉಚಿತ ಇಂಟರ್‌ನೆಟ್ ಒದಗಿಸುವ ಯೋಜನೆ ರೂಪಿಸಿರಲಿಲ್ಲ.

LEAVE A REPLY

Please enter your comment!
Please enter your name here