ಕೇರಳದಲ್ಲಿ ಆಕಾಶದೆತ್ತರದ 2 ಅಪಾರ್ಟ್ಮೆಂಟ್ ಡೆಮಾಲಿಶ್ – ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಶಾಕ್

ಕೇರಳ ರಾಜ್ಯದಲ್ಲಿ ಅಕ್ರಮವಾಗಿ ಕಟ್ಟಲಾಗಿರುವ 2 ಬೃಹತ್ ಅಪಾರ್ಟ್ಮೆಂಟ್ ಗಳನ್ನು ನೆಲಸಮ ಮಾಡಲಾಗಿದೆ.

ಎರ್ನಾಕುಲಂ ಜಿಲ್ಲೆಯಲ್ಲಿ ಕಟ್ಟಲಾಗಿರುವ 19 ಅಂತಸ್ತಿನ ಹೆಚ್ ಟ್ವೆಂಟಿ ಅಪಾರ್ಟ್ಮೆಂಟ್ ಕೆಲವೇ ಕೆಲವು ಸೆಕೆಂಡುಗಳಲ್ಲಿ ಕೆಲಸ ಮಾಡಲಾಯಿತು. ಅಪಾರ್ಟ್ಮೆಂಟ್ನಲ್ಲಿ 90 ಮನೆಗಳಿದ್ವು.

ಈ ಅಪಾರ್ಟ್ಮೆಂಟ್ ಬಳಗ ಬರೋಬ್ಬರಿ 500 ಕೆಜಿ ಸ್ಫೋಟಕವನ್ನು ಇಟ್ಟು ರಿಮೋಟ್ ಕಂಟ್ರೋಲ್ ಮೂಲಕ ಕೆಲಸ ಮಾಡಲಾಯಿತು.

ಇದಲ್ಲದೇ 17 ಮತ್ತು 12 ಅಂತಸ್ತಿನ 73 ಪ್ಲಾಟ್ ಗಳಿರುವ ಆಲ್ಫಾ ಸೆರೆನೆ ಕಾಂಪ್ಲೆಕ್ಸ್ ಹೆಸರಿನ ಟವರ್ ನ್ನು ನೆಲಸಮ ಮಾಡಲಾಯಿತು.

ನಾಳೆ ಮಧ್ಯಾಹ್ನ 2:00 ಗಂಟೆಗೆ 17 ಅಂತಸ್ತಿನ 122 ಫ್ಲ್ಯಾಟ್ ಗಳಿರುವ ಜೈನ್ ಕೊರಲ್ ಕೋವ್ ಮತ್ತು 40 ಫ್ಲಾಟ್ ಗಳಿರುವ 17 ಅಂತಸ್ತಿನ ಗೋಲ್ಡನ್ ಕಾಯಲೋರಂ ಅಪಾರ್ಟ್ಮೆಂಟ್ ಗಳನ್ನು ನೆಲಸಮ ಮಾಡಲಾಗುತ್ತದೆ.

ಕೆರೆಗಳ ಪಕ್ಕದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಅಪಾರ್ಟ್ಮೆಂಟ್ ಗಳನ್ನು ಕಟ್ಟಿದ್ದರ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ದಾವೆ ಸಲ್ಲಿಸಲಾಗಿತ್ತು. ಹಿನ್ನಲೆಯಲ್ಲಿ ನೆಲಸಮಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.

ಫ್ಯಾಟ್ ನೆಲಸಮಕ್ಕೆ ಮೊದಲು ಮೂರು ಬಾರಿ ಸೈರನ್ ಕೂಗಲಾಗುತ್ತದೆ. ಈ ಪ್ರದೇಶದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

LEAVE A REPLY

Please enter your comment!
Please enter your name here