ಕೇಜ್ರಿವಾಲ್ ವಿರುದ್ಧ ಕಣಕ್ಕಿಳಿದ ಕರ್ನಾಟಕದ ಸ್ವಾಮೀಜಿ ಯಾರು..?

ದೆಹಲಿ ವಿಧಾನಸಭೆ ಚುನಾವಣೆ ಸಂಬಂಧ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕರ್ನಾಟಕದ ಸ್ವಾಮೀಜಿಯೊಬ್ಬರು ಕಣಕ್ಕೆ ಇಳಿದಿದ್ದಾರೆ. ವಿಜಯಪುರ ಮೂಲದ ವೆಂಕಟೇಶ್ವರ ಸ್ವಾಮಿ ಆಲಿಯಾಸ್ ದೀಪಕ್ ಎಂಬುವವರು ನಿನ್ನೆ ನವದೆಹಲಿ ವಿಧಾನಸಭೆಗೆ ಮೂರು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ, ಎನ್‍ಸಿಪಿ ಮತ್ತು ಹಿಂದೂಸ್ತಾನ್ ಜನತಾ ಪಾರ್ಟಿ ಹೆಸರಿನಲ್ಲಿ ವೆಂಕಟೇಶ್ವರ ಸ್ವಾಮಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ತನ್ನ ಜೇಬಲ್ಲಿ ಕೇವಲ 9 ರೂಪಾಯಿ ಮಾತ್ರ ಇದೆ. ಬ್ಯಾಂಕ್‍ನಲ್ಲಿ ಒಂದು ರೂಪಾಯಿ ಕೂಡ ಇಲ್ಲ. ಜೊತೆಗೆ ತಾನು 99,999 ರೂಪಾಯಿ ಸಾಲ ಹೊಂದಿದ್ದೇನೆ ಎಂದು ಅಫಿಡವಿಟ್‍ನಲ್ಲಿ ತಿಳಿಸಿದ್ದಾರೆ. ಕೇಜ್ರಿವಾಲ್‍ರನ್ನು ಸೋಲಿಸುವುದೇ ತನ್ನ ಗುರಿ ಎಂದು ವೆಂಕಟೇಶ್ವರ ಸ್ವಾಮಿ ಹೇಳಿಕೊಂಡಿದ್ದಾರೆ.

ತನಗೆ ದೆಹಲಿ ವಿಳಾಸ ಇಲ್ಲ. ಹೀಗಾಗಿ ವಿಜಯಪುರದ ಅಡ್ರೆಸ್ ನೀಡಿದ್ದು, ತಾನು ಸದ್ಯ ದೆಹಲಿ ರೈಲ್ವೇ ನಿಲ್ದಾಣದಲ್ಲಿ ವಾಸ್ತವ್ಯ ಹೂಡಿದ್ದೇನೆ. ತನ್ನನ್ನ ಈ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here