ಕೇಂದ್ರ ಗೃಹ ಸಚಿವಾಲಯದ ಆತ್ಮನಿರ್ಭರ ಯಡವಟ್ಟು – ವಿದೇಶಿ ಉತ್ಪನ್ನಗಳ ಪಟ್ಟಿಯಲ್ಲಿ ಸ್ವದೇಶಿ ಉತ್ಪನ್ನಗಳೂ ನಿಷೇಧ..!

ದೇಶದ ಉದ್ದಗಲದಲ್ಲಿರುವ ಅರೆಸೇನಾ ಪಡೆಗಳ ಕ್ಯಾಂಟೀನ್‌ಗಳಲ್ಲಿ  1,026 ಉತ್ಪನ್ನಗಳನ್ನು ವಿದೇಶಿ ಉತ್ಪನ್ನಗಳನ್ನೆಂದು ವರ್ಗೀಕರಿಸಿ ಅವುಗಳ ಮಾರಾಟ ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದ ಕೆಲವೇ ಹೊತ್ತಲ್ಲಿ ವಾಪಸ್‌ ಪಡೆದಿದೆ.

ಆತ್ಮನಿರ್ಭರ ಯೋಜನೆಯಡಿಯಲ್ಲಿ ವಿದೇಶಿ ಉತ್ಪನ್ನಗಳನ್ನು ನಿಷೇಧಿಸುವ ಆದೇಶದಲ್ಲಿ ಭಾರತದಲ್ಲೂ ಉತ್ಪಾದಿಸಿದ ಸ್ವದೇಶಿ ಉತ್ಪನ್ನಗಳನ್ನೂ ಸೇರಿಸಿದ ಯಡವಟ್ಟಿನ ಬಳಿಕ ಗೃಹ ಸಚಿವಾಲಯ ತನ್ನದೇ ಆದೇಶ ವಾಪಸ್‌ ಪಡೆದಿದೆ.

ಮಾಜಿ ಬಿಜೆಪಿ ಸಂಸದೆ ಶೀಲಾ ಗೌತಮ್‌ ಸ್ಥಾಪಿಸಿದ್ದ ಕಂಪನಿ ಉತ್ಪಾದಿಸುವ ಸ್ಲೀಪ್‌ವೆಲ್‌ ಮ್ಯಾಟರ್ಸ್‌, ವಿಐಪಿ ಸೂಟ್‌ಕೇಸ್‌, ಡಾಬರ್‌, ಬಜಾಜ್‌, ಟಿಟಿಕೆ ಪ್ರೆಸ್ಟೀಜ್‌ ಹೀಗೆ ಭಾರತದ ಕಂಪನಿಗಳೇ ಉತ್ಪಾದಿಸಿದ್ದ ಉತ್ಪನ್ನಗಳನ್ನು ಗೃಹ ಸಚಿವಾಲಯ ನಿಷೇಧಿಸಿತ್ತು. ಕೇಂದ್ರೀಯ ಕಲ್ಯಾಣ ಭಂಡಾರದಲ್ಲಿ ಈ 1,026 ಉತ್ಪನ್ನಗಳನ್ನು ನಿಷೇಧಿಸಿತ್ತು.

ಮೇ 13ರಂದು ಟ್ವೀಟಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅರೆಸೇನಾ ಪಡೆಗಳ ಕ್ಯಾಂಟೀನ್‌ನಲ್ಲಿ ಕೇವಲ ಸ್ವದೇಶಿ ಉತ್ಪನ್ನಗಳಷ್ಟೇ ಮಾರಾಟ ಮಾಡಲಾಗುತ್ತದೆ. ಈ ಸಂಬಂಧ ಆದೇಶ ನೀಡಿದ್ದಾಗಿ ಹೇಳಿದ್ದರು.

LEAVE A REPLY

Please enter your comment!
Please enter your name here