ಕೇಂದ್ರದ ಪ್ಯಾಕೇಜ್ ದೇಶದ ಜಿಡಿಪಿಯ 10ರಷ್ಟೋ..? ಕೇವಲ 1ರಷ್ಟೋ..? ಇಲ್ಲಿದೆ ನಿಖರ ಮಾಹಿತಿ

ಕೊರೋನಾ ಲಾಕ್‍ಡೌನ್‍ನಿಂದ ಬಿಕ್ಕಟ್ಟಗೆ ಸಿಲುಕಿರುವ ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ವಿವಿಧ ವಲಯಗಳಿಗೆ 20 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್ ಘೋಷಿಸಿತ್ತು. ಇದು ದೇಶದ ಜಿಡಿಪಿ ಶೇಕಡಾ 10ರಷ್ಟು ಎಂದು ಹೇಳಿಕೊಂಡಿತ್ತು. ಆದರೆ, ವಾಸ್ತವದಲ್ಲಿ ಆರ್ಥಿಕ ಪ್ಯಾಕೇಜ್ ಮೊತ್ತ ನಿಜಕ್ಕೂ ಅಷ್ಟು ದೊಡ್ಡದಲ್ಲ ಎಂದು ಅನೇಕ ಬ್ಯಾಂಕ್‍ಗಳು, ರೇಟಿಂಗ್ ಏಜೇನ್ಸಿಗಳು ಹೇಳುತ್ತಿವೆ. ಈ ಮೂಲಕ ಕೇಂದ್ರ ಸರ್ಕಾರದ ಬಣ್ಣವನ್ನು ಬಯಲು ಮಾಡಿವೆ.

ಖುದ್ದು ಎಸ್‍ಬಿಐ ಹೇಳಿದ್ದು ಎಷ್ಟು..?
ಸರ್ಕಾರಿ ಸ್ವಾಮ್ಯದ ಅತೀದೊಡ್ಡ ಬ್ಯಾಂಕ್ ಎಸ್‍ಬಿಐನ ಸಂಶೋಧನಾ ವಿಭಾಗ ಕೂಡ, ಕೇಂದ್ರ ಸರ್ಕಾರ ಹೇಳಿದ್ದನ್ನು ಅಲ್ಲಗೆಳೆದಿದೆ.ಕೇಂದ್ರ ಪ್ಯಾಕೇಜ್‍ನಿಂದ ಅಲ್ಪಾವಧಿಯಲ್ಲಿ ಯಾವುದೇ ಪ್ರಯೋಜನ ಆಗುವುದಿಲ್ಲ. ದೇಶದ ಒಟ್ಟಾರೆ ಆರ್ಥಿಕತೆಗೆ ಇದರಿಂದ 2 ಲಕ್ಷ ಕೋಟಿ ಸಿಗಬಹುದು. 20 ಲಕ್ಷ ಕೋಟಿ ಅಲ್ಲ ಇದು ದೇಶದ ಜಿಡಿಪಿಯ ಕೇವಲ 1ರಷ್ಟು ಎಂದು ಸ್ಪಷ್ಟಪಡಿಸಿದೆ.

ಕೇಂದ್ರ ವಿತ್ತ ಸಚಿವೆ ಘೋಷಿಸಿದ ಪ್ಯಾಕೇಜ್‍ನಲ್ಲಿ ಈ ಹಿಂದೆಯೇ ಘೋಷಿಸಿದ್ದ ಅನೇಕ ಆರ್ಥಿಕ ನೆರವುಗಳು ಸೇರಿವೆ. ಇದರಿಂದಾಗಿ ದೇಶದ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮವೇನು ಬೀರೋದಿಲ್ಲ. ನಮ್ಮ ಅಂದಾಜಿನ ಪ್ರಕಾರ ಕೇಂದ್ರ ಸರ್ಕಾರ ಘೋಷಿಸಿದ ಪ್ಯಾಕೇಜ್ ಗಾತ್ರ ದೇಶದ ಜಿಡಿಪಿ ಶೇಕಡಾ1 ರಷ್ಟು ಎಂದು ಫಿಚ್ ಹೇಳಿದೆ.

ಇನ್ನು ಏಜೇನ್ಸಿಗಳ ರೇಟಿಂಗ್ ಏನು ಎಂಬುದನ್ನು ನೋಡೋಣ
* ಹೆಚ್‍ಎಸ್‍ಬಿಸಿ – 1.0 %
* ಗೋಲ್ಡ್‍ಮನ್ ಸ್ಯಾಚಸ್ – 1.3 %
* ಮೋತಿಲಾಲ್ ಓಸ್ವಾಲ್ – 1.3%
* ಯುಬಿಎಸ್ – 1.2%
* ಬೋಫಾ – 1.1%
* ಕೋಟಕ್ – 1.0%
* ಸಿಎಲ್‍ಎಸ್‍ಎ – 0.8%
* ನೋಮುರಾ – 0.8%
* ಬಾಕ್ರ್ಲೆಸ್ – 0.75%

ಕೇಂದ್ರದ ಸಮರ್ಥನೆ ಏನು..?
ಈ ಎಲ್ಲಾ ಏಜೆನ್ಸಿಗಳ ವರದಿಗಳ ಬೆನ್ನಲ್ಲೇ ಕೇಂದ್ರ ಸರ್ಕಾರ, ಆರ್ಥಿಕ ಪ್ಯಾಕೇಜ್‍ನಿಂದ ದೇಶದಲ್ಲಿ ಹೆಚ್ಚಳವಾಗುವ ಹಣದ ಹರಿವನ್ನು ಸೇರಿ ನಾವು ಪ್ಯಾಕೇಜ್‍ನ ಗಾತ್ರವನ್ನು ಹೇಳಿದ್ದೇವೆ ಅಷ್ಟೇ ಎಂದು ಸಮರ್ಥನೆ ಮಾಡಿಕೊಂಡಿದೆ.ಜಾಗತಿಕ ಮಟ್ಟದಲ್ಲಿ ಇದೇ ಪದ್ದತಿ ಅನುಸರಿಸಲಾಗುತ್ತಿದೆ ಎಂದು ಹೇಳಿಕೊಂಡಿದೆ.

LEAVE A REPLY

Please enter your comment!
Please enter your name here