ಕೇಂದ್ರದಿಂದ ಗುಡ್ ನ್ಯೂಸ್.. ಪುರುಷ ಉದ್ಯೋಗಿಗಳಿಗೆ ಪಿತೃತ್ವ ರಜೆ..!

ಪುರುಷ ಉದ್ಯೋಗಿಗಳೇ ನೀವು ಈ ವರ್ಷ ಅಪ್ಪ ಆಗುತ್ತಿದ್ದೀರಾ..? ಹಾಗಿದ್ದರೇ ನಿಮಗೊಂದು ಗುಡ್‍ನ್ಯೂಸ್. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿಮಗೆ ಹೊಸ ವರ್ಷದ ಗಿಫ್ಟ್ ನೀಡಲು ಮುಂದಾಗಿದೆ. ಹೆಣ್ಮಕ್ಕಳಿಗೆ ಹೆರಿಗೆ ರಜೆ ನೀಡುವ ಮಾದರಿಯಲ್ಲಿಯೇ ಪುರುಷ ಉದ್ಯೋಗಿಗಳಿಗೆ ಪಿತೃತ್ವ ರಜೆ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಈಗಾಗಲೇ ಆಡಳಿತ ಮತ್ತು ಸಿಬ್ಬಂದಿ, ಶಿಕ್ಷಣ ಇಲಾಖೆ ಜೊತೆ ಚರ್ಚೆಗಳನ್ನು ಕೇಂದ್ರ ಕಾರ್ಮಿಕ ಸಚಿವಾಲಯ ನಡೆಸಿದೆ. ಚರ್ಚೆಗಳು ಅಂತಿಮ ಹಂತಕ್ಕೆ ಬಂದಿದ್ದು, ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಪಿತೃತ್ವ ರಜೆಗೆ ಸಂಬಂಧಿಸಿದ ಮಸೂದೆಯನ್ನು ಸಂಸತ್‍ನ ಉಭಯ ಸದನಗಳಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲು ತೀರ್ಮಾನಿಸಿದೆ.

ಪಿತೃತ್ವ ರಜೆ ಕುರಿತ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದರೇ, ಸರ್ಕಾರಿ ಉದ್ಯೋಗಿಗಳು, ಖಾಸಗಿ ರಂಗದ ಉದ್ಯೋಗಿಗಳು ಎಂಬ ಬೇಧ ಇಲ್ಲದೇ ಎಲ್ಲರಿಗೂ ಪಿತೃತ್ವ ರಜೆಗಳು ಸಿಗಲಿದೆ.

ಆದರೆ, ಪಿತೃತ್ವ ರಜೆಯನ್ನು ಎಷ್ಟು ದಿನಗಳ ಕಾಲ ನೀಡಬೇಕೆಂಬುದು ಇನ್ನೂ ನಿರ್ಧಾರವಾಗಿಲ್ಲ. ಸದ್ಯದ ಮಟ್ಟಿಗೆ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಹಲವು ಷರತ್ತುಗಳೊಮದಿಗೆ 15 ದಿನ ಪಿತೃತ್ವ ರಜೆಯನ್ನು ನೀಡಲಾಗುತ್ತಿದೆ. ಖಾಸಗಿ ರಂಗದ ಉದ್ಯೋಗಿಗಳಿಗೆ ಪಿತೃತ್ವ ರಜೆ ನೀಡಬೇಕೆಂಬ ನಿಯಮ ಇಲ್ಲ.

LEAVE A REPLY

Please enter your comment!
Please enter your name here