ಕೇಂದ್ರದಿಂದ ಆರ್ಥಿಕ ಪ್ಯಾಕೇಜ್ -2.. ಯಾರಿಗೆ ಏನು ಸಿಕ್ತು..?

ಆತ್ಮ ನಿರ್ಭರ ಭಾರತ – ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ಆರ್ಥಿಕ ವಿಶೇಷ ಪ್ಯಾಕೇಜ್‍ನಲ್ಲಿ ನಿನ್ನೆ ಸಣ್ಣ ಕೈಗಾರಿಕೆಗಳಿಗೆ, ಹಣಕಾಸು ಸಂಸ್ಥೆಗಳು, ರಿಯಲ್ ಎಸ್ಟೇಟ್ ಮಂದಿಗೆ ಒಂದಿಷ್ಟು ನೆರವು ಸಿಕ್ಕಿತ್ತು. ಆರ್ಥಿಕ ಪ್ಯಾಕೇಜ್‍ನ ಮುಂದುವರೆದ ಭಾಗವಾಗಿ ಇಂದು ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೊರೋನಾ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ರೈತರು, ವಲಸೆ ಕಾರ್ಮಿಕರಿಗೆ ಹಣಕಾಸು ನೆರವಿನ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

ರೈತರಿಗೆ ಬಂಪರ್
# ಕಿಸಾನ್ ಕಾರ್ಡ್‍ದಾರರಿಗೆ 25 ಸಾವಿರ ಕೋಟಿ ಸಾಲ
# ಕೃಷಿ ಸಾಲಗಳ ಮೇಲೆ ಮೂರು ತಿಂಗಳು ಮಾರಿಟೋರಿಯಂ
# ಸಕಾಲದಲ್ಲಿ ಸಾಲ ಪಾವತಿಸುವ ರೈತರಿಗೆ ಮೇ 31ರವರೆಗೂ ಬಡ್ಡಿ ವಿನಾಯ್ತಿ
# ಕಡಿಮೆ ಜಮೀನು ಹೊಂದಿರುವ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ

ಬೀದಿ ಬದಿ ವ್ಯಾಪಾರಿಗಳಿಗೆ/ ಮಧ್ಯಮವರ್ಗಕ್ಕೆ ಏನೇನು..?
# 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ 5 ಸಾವಿರ ಕೋಟಿ ಸಾಲ ಸೌಲಭ್ಯ
# ವರ್ಕಿಂಗ್ ಕ್ಯಾಪಿಟಲ್ ಅಡಿಯಲ್ಲಿ ಒಬ್ಬೊಬ್ಬರಿಗೆ 10 ಸಾವಿರ ರೂ.ಸಾಲ
# ಮುಂದಿನ ಒಂದು ತಿಂಗಳಲ್ಲಿ ಈ ಸಾಲ ಯೋಜನೆ ಜಾರಿ
# ಮಧ್ಯಮ ವರ್ಗದ ಮಂದಿಗೆ ಗೃಹ ಸಾಲಗಳ ಮೇಲಿನ ಬಡ್ಡಿ ರಿಯಾಯಿತಿ ಯೋಜನೆ ಮತ್ತೊಂದು ವರ್ಷದ ಅವಧಿಗೆ ವಿಸ್ತರಣೆ
# 6ರಿಂದ 18 ಲಕ್ಷ ರೂ.ಆದಾಯ ಇರುವವರಿಗೆ ಈ ಯೋಜನೆ ಲಭ್ಯ
# ಮುದ್ರಾ ಯೋಜನೆಯಡಿ 50ಸಾವಿರದೊಳಗೆ ಸಾಲ ಪಡೆದವರಿಗೆ ಬಡ್ಡಿ ರಿಯಾಯಿತಿ
# ಮಾರಿಟೋರಿಯಂ ವಧಿ ಬಳಿಕ ಮುದ್ರಾ ಸಾಲಗಳ ಮೇಲೆ ಶೇ.2ರಷ್ಟು ಬಡ್ಡಿ ರಿಯಾಯಿತಿ

ವಲಸೆದಾರರಿಗೆ ಬಾಡಿಗೆ ಗೃಹ ಭಾಗ್ಯ
# ವಲಸೆ ಕಾರ್ಮಿಕರು, ನಗರ ಬಡವರಿಗಾಗಿ ಕಡಿಮೆ ಬಾಡಿಗೆಯ ಮನೆಗಳ ನಿರ್ಮಾಣಕ್ಕಾಗಿ ಹೊಸ ಯೋಜನೆ
# ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರಗಳು ಈ ಯೋಜನೆ ಕೈಗೊಂಡರೆ ಕೇಂದ್ರದಿಂದ ನೆರವು
# ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಈ ಯೋಜನೆ ಜಾರಿ
# ಈ ಯೋಜನೆಗೆ ಭೂಮಿ ಇರುವವರು ಮುಂದೆ ಬಂದರೆ ಕೇಂದ್ರದಿಂದ ಅಗತ್ಯ ನೆರವು

ವಲಸೆ ಕಾರ್ಮಿಕರಿಗೆ ನಗದು..!
# ನಗರ ಪ್ರದೇಶದ ಬಡವರು, ವಲಸೆ ಕಾರ್ಮಿಕರಿಗೆ ಊಟ ವಿತರಿಸಲಾಗಿದೆ
# ವಲಸೆ ಕಾರ್ಮಿಕರ ಸಂತ್ರಸ್ತ ಶಿಬಿರಗಳು, ಊಟಕ್ಕಾಗಿ ರಾಜ್ಯಗಳಿಗೆ 11 ಸಾವಿರ ಕೋಟಿ ರೂ ಮೀಸಲು
# ವಲಸೆ ಕಾರ್ಮಿಕರಿಗೆ ನಗದು ನೆರವು ನೀಡಲಾಗಿದೆ, ಮೂರು ಹೊತ್ತು ಊಟ ನೀಡಲಾಗುತ್ತಿದೆ
# ನಗರ ಪ್ರದೇಶದ ಎನ್‍ಜಿಓಗಳಿಗೆ 12 ಸಾವಿರ ಕೋಟಿ ನೀಡಲಾಗಿದೆ
# ಪೈಸಾ ಪೋರ್ಟಲ್ ಮೂಲಕ ಎನ್‍ಜಿಓಗಳಿಗೆ ರಿವಾಲ್ವಿಂಗ್ ಫಂಡ್ ನೀಡಲಾಗಿದೆ

ಗ್ರಾಮೀಣ ಮೂಲ ಸೌಕರ್ಯಕ್ಕಾಗಿ 4200 ಕೋಟಿ
# ವಲಸೆ ಕಾರ್ಮಿಕರಿಗೆ ಮೇ 13ರಿಂದ 13 ಕೋಟಿ ಕೆಲಸ ದಿನಗಳನ್ನು ಕಲ್ಪಿಸಲಾಗಿದೆ
# ಗ್ರಾಮೀಣ ಪ್ರದೇಶದ ಮೂಲ ಸೌಕರ್ಯಕ್ಕಾಗಿ 4200 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ
# ಕೃಷಿ ಉತ್ಪನ್ನಗಳ ಖರೀದಿಗಾಗಿ ರಾಜ್ಯಗಳಿಗೆ ವರ್ಕಿಂಗ್ ಕ್ಯಾಪಿಟಲ್ ಅಡಿಯಲ್ಲಿ 6700 ಕೋಟಿ.
# ಉದ್ಯೋಗ ಖಾತ್ರಿ ಯೋಜನೆಯಡಿ ಈಗಾಗಲೇ 10 ಸಾವಿರ ಕೋಟಿ ಬಟವಾಡೆ ಮಾಡಲಾಗಿದೆ

ಕನಿಷ್ಠ ಕಾರ್ಮಿಕ ವೇತನ
# ದೇಶದಲ್ಲಿ ಶೇಕಡಾ 30 ಮಂದಿಗೆ ಮಾತ್ರ ಕನಿಷಠ ವೇತನ ಸಿಗುತ್ತಿದೆ
# ದೇಶದಲ್ಲೆಲ್ಲಾ ಒಂದೇ ರೀತಿಯ ಕನಿಷ್ಠ ಕಾರ್ಮಿಕ ವೇತನ ನಿಗದಿ ಮಾಡಲಾಗುತ್ತದೆ
# ಎಲ್ಲಾ ಕಾರ್ಮಿಕರಿಗೆ ಆರೋಗ್ಯ ಪರೀಕ್ಷೆ
# ಕಾರ್ಮಿಕರನ್ನು ಏಜೆನ್ಸಿ ಮೂಲಕ ತೆಗೆದುಕೊಳ್ಳುವ ಬದಲು ನೇರವಾಗಿ ಕೆಲಸಕ್ಕೆ ತೆಗೆದುಕೊಳ್ಳಲು ಕ್ರಮ
# ಕಂಪನಿಗಳು, ಸಂಸ್ಥೆಗಳು ಕಾರ್ಮಿಕರನ್ನು ನೇರವಾಗಿ ನೇಮಕ ಮಾಡಿಕೊಳ್ಳಲು ಕ್ರಮ
# 10ಕ್ಕೂ ಹೆಚ್ಚು ಮಂದಿ ಕೆಲಸ ಮಾಡುವ ಕಂಪನಿಗಳಿಗೆ ಇಎಸ್‍ಐ ಸೌಲಭ್ಯ
# ವಲಸೆ ಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಕ್ರಮ
# ವಲಸೆ ಕಾರ್ಮಿಕರು ಹೊಸ ಸ್ಥಳದಲ್ಲಿ ರಿಜಿಸ್ಟರ್ ಮಾಡಿಕೊಂಡು ಕೆಲಸ ಹೊಂದಬಹುದು
# ಎಸ್‍ಡಿಆರ್‍ಎಫ್ ಅಡಿ ರಾಜ್ಯಗಳಿಗೆ 11 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ

ಒಂದೇ ದೇಶ- ಒಂದೇ ಕಾರ್ಡು
# ಪಡಿತರ ಕಾರ್ಡ್‍ದಾರರಿಗೆ ಉಚಿತ ಆಹಾರ ಧಾನ್ಯ
# ಒಬ್ಬೊಬ್ಬರಿಗೆ ಐದು ಕೆಜಿ ಅಕ್ಕಿ/ಗೋಧಿ ವಿತರಣೆ
# ಒಂದೊಂದು ಕಾರ್ಡ್‍ಗೆ 1 ಕೆಜಿ ತೊಗರಿ ಬೇಳೆ
# ವಲಸೆ ಕಾರ್ಮಿಕರಿಗೆ ಕಾರ್ಡ್ ಇದ್ದರೂ, ಇಲ್ಲದಿದ್ದರೂ ಉಚಿತ ಪಡಿತರ
# ಪಡಿತರ ಕಾರ್ಡು ಪೋರ್ಟೆಬಲಿಟಿಗೆ ಅವಕಾಶ ಕಲ್ಪಿಸಲು ಪ್ರಯತ್ನ
# ಪಡಿತರದಾರರು ಎಲ್ಲಿದ್ದರೂ ಪಡಿತರ ಧಾನ್ಯ ಪಡೆಯಬಹುದು
# ಆಗಸ್ಟ್ ತಿಂಗಳಿಂದ ಒಂದೇ ದೇಶ – ಒಂದೇ ಪಡಿತರ ಕಾರ್ಡ್
# ಸದ್ಯ ದೇಶದಲ್ಲಿ 63 ಕೋಟಿ ಮಂದಿ ಬಳಿ ಪಡಿತರ ಕಾರ್ಡ್ ಇದೆ

LEAVE A REPLY

Please enter your comment!
Please enter your name here