ಕೆಸಿಇಟಿ 2022; ನಾಳೆ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಮೊದಲ ಸುತ್ತಿನ ಸೀಟು ಹಂಚಿಕೆಯ ಮಾಹಿತಿಯನ್ನು ನಾಳೆ ಪ್ರಕಟಿಸುವುದಾಗಿ ತಿಳಿಸಿದೆ.

ಕೆಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆಯು ರಾಜ್ಯ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ kea.kar.nic.in ನಲ್ಲಿ ಪ್ರಕಟಗೊಳ್ಳಲಿದೆ. ಕೌನ್ಸೆಲಿಂಗ್ ಪ್ರಕ್ರಿಯೆಗೆ ನೋಂದಾಯಿತರಾದ ಅಭ್ಯರ್ಥಿಗಳು 2022ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಸೀಟು ಹಂಚಿಕೆಯನ್ನು ವೀಕ್ಷಿಸಲು ಲಾಗಿನ್ ಆಗಬೇಕು.

ಅಭ್ಯರ್ಥಿಗಳ ಆಯ್ಕೆಗಳು, ಮತ್ತವರ ಕೆಸಿಇಟಿ ಕಾರ್ಯಕ್ಷಮತೆ ಮತ್ತು ಸೀಟುಗಳ ಲಭ್ಯತೆಯ ಆಧಾರದ ಮೇಲೆ ಕೆಸಿಇಟಿ 2022 ಸೀಟು ಹಂಚಿಕೆಯಾಗಲಿದೆ. ಹಂಚಿಕೆಯಾದ ನಂತರ ಸೀಟುಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು ಆಯ್ಕೆಗಳನ್ನು ಆರಿಸಿಕೊಳ್ಳಬಹುದಾಗಿದೆ.

ಅಭ್ಯರ್ಥಿಗಳು ಈಗಾಗಲೇ ತಮ್ಮ ಇಷ್ಟದ ಸಂಸ್ಥೆಗಳು ಮತ್ತು ವಿಷಯಗಳನ್ನು ಕೆಸಿಇಟಿ 2022 ಪೋರ್ಟಲ್ ಅನ್ನು ಭರ್ತಿ ಮಾಡಿದ್ದಾರೆ. ಅಂತಿಮ ಕೆಸಿಇಟಿ ಸೀಟು ನಿಯೋಜನೆ ಮಾಡುವ ಪರೀಕ್ಷಾ ಪ್ರಾಧಿಕಾರವು ಈಗಾಗಲೇ ಅಣುಕು ಸೀಟು ಹಂಚಿಕೆ ಫಲಿತಾಂಶವನ್ನು ಇದೇ ಅ.21ರಂದು ಪ್ರಕಟಿಸಿತ್ತು. ಈ ಫಲಿತಾಂಶಗಳು ಅಭ್ಯರ್ಥಿಗಳಿಗೆ ಲಭ್ಯವಾಗುವಂತೆ ನೋಡಿಕೊಂಡ ಪ್ರಾಧಿಕಾರವು ಅಂತಿಮ ಪಟ್ಟಿಯನ್ನು ನಾಳೆ ಶುಕ್ರವಾರ ಬಿಡುಗಡೆ ಮಾಡಲಿದೆ.