ಕೆಲಸ ಹುಡುಕುತ್ತಿದ್ದೀರಾ? ಇದನ್ನೊಮ್ಮೆ ಓದಿ.

2020 ರ ಈ ಹೊಸ ವರ್ಷದಲ್ಲಿ ಪ್ರಸ್ತುತ ಜಗತ್ತಿನಾದ್ಯಂತ ಉದ್ಯೋಗ ಭದ್ರತೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಈಗ ನೀವು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಮುಂದಿನ ವೃತ್ತಿಜೀವನ ಖಚಿತವಿಲ್ಲದಿದ್ದಾಗ ಏನು ಮಾಡಬೇಕು?
ಈಗಿರುವ ಕೆಲಸ ಬಿಟ್ಟು ಹೊಸ ಕೆಲಸಕ್ಕೆ ಸೇರಿಕೊಳ್ಳುವ ಬಯಕೆ ನಿಮ್ಮಲ್ಲಿದ್ದರೂ ಅದನ್ನು ಹೇಗೆ ಕಾರ್ಯಗತಗೊಳಿಸಬೇಕೆಂದು ತಿಳಿಯದೆ ಗೊಂದಲದಲ್ಲಿ ಇರುವಿರಾ? ಅಥವಾ ನೀವು ಈಗ ತಾನೆ ಹೊಸದಾಗಿ ಕೆಲಸ ಸೇರಲು ಇಚ್ಛಿಸಿದ್ದು ಎಲ್ಲಿಂದ ಆರಂಭಿಸಬೇಕು ಎಂಬುದು ಅರ್ಥವಾಗದೆ ಗಲಿಬಿಲಿಗೊಂಡಿರುವಿರಾ?
ಎಂಥ ಕೆಲಸಕ್ಕೆ ಸೇರಿಕೊಳ್ಳಬೇಕು ಹಾಗೂ ಅದರ ಬಗೆಗಿನ ದೂರದೃಷ್ಟಿಗಳ ಕೊರತೆಯಿಂದ ಮನಸ್ಸಿನಲ್ಲಿ ಹಲವಾರು ಗೊಂದಲಗಳು ಉಂಟಾಗುತ್ತವೆ.

ಉದ್ಯೋಗವನ್ನು ಹುಡುಕುವುದು ಸುಲಭದ ಕೆಲಸವಲ್ಲ, ವಿಶೇಷವಾಗಿ ಉದ್ಯೋಗ ಮಾರುಕಟ್ಟೆ ಈಗಾಗಲೇ ತುತ್ತ ತುದಿಯಲ್ಲಿರುವಾಗ  ಆಗಿರುವಾಗ. ನಿಮ್ಮ ಹುಡುಕಾಟವನ್ನು ಪ್ರಾರಂಭಿಸುವ ಮೊದಲು, ನೀವು ಗಮನಿಸಬೇಕಾದ ಹಲವು ವಿಷಯಗಳಿವೆ.
ನಿಮ್ಮ ರೆಸ್ಯೂಮ್ ನವೀಕರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದರ ಜೊತೆಗೆ ಮತ್ತು ನೀವು ಕೆಲಸ ಮಾಡಲು ಬಯಸುವ ಕಂಪೆನಿಯ ಬಗ್ಗೆ ಸಂಶೋಧನೆ ಮಾಡಿ.
ಯಾವ ಸಮಯದಲ್ಲಿ ಕೆಲಸ ಹುಡುಕುತ್ತೀರಿ ಅನ್ನುವುದು ಕೂಡ ಮುಖ್ಯ

ನಿಮಗೆ ಈಗಾಗಲೇ ತಿಳಿದಿಲ್ಲದಿದ್ದರೆ, ಕೆಲಸ ಹುಡುಕುವುದಕ್ಕೂ ಒಳ್ಳೆಯ ಮತ್ತು ಕೆಟ್ಟ ಸಮಯಗಳಿವೆ ಎಂದು ನಾವು ನಿಮಗೆ ಹೇಳುತ್ತೇವೆ.ನಿಮ್ಮ ಅಮೂಲ್ಯವಾದ ಸಮಯವನ್ನು ನೀವು ಕಡೆಗಣಿಸಬಾರದು ಹಾಗೆಯೇ ನೀವು ಸರಿಯಾದ ಸಮಯದಲ್ಲಿ ಉದ್ಯೋಗಕ್ಕಾಗಿ ಹುಡುಕಾಟವನ್ನು ಪ್ರಾರಂಭಿಸಿದಾಗ, ಬೇಗನೇ ಉದ್ಯೋಗ ಪಡೆಯುವ ಸಾಧ್ಯತೆಗಳೂ ಹೆಚ್ಚು.
ಯಾವ ತಿಂಗಳಿನಲ್ಲಿ ಕೆಲಸ ಹುಡುಕುವುದು ಸೂಕ್ತ ?
ಜನವರಿ, ಫೆಬ್ರವರಿ ಮತ್ತು ಮಾರ್ಚ್‌ (ಉತ್ತಮ ಸಮಯ)

ಯಾವ ಕಂಪೆನಿಯ ಹಣಕಾಸು ವರ್ಷವು ಜನವರಿಯಲ್ಲಿ ಪ್ರಾರಂಭವಾಗುತ್ತದೆ ಮತ್ತು ಡಿಸೆಂಬರ್‌ನಲ್ಲಿ ಕೊನೆಗೊಳ್ಳುತ್ತದೆ, ಅಂತಹ ಕಂಪೆನಿಗಳಲ್ಲಿ ಉದ್ಯೋಗವನ್ನು ಹುಡುಕಲು ಇದು ಸೂಕ್ತ ಸಮಯ.
ಹೆಚ್ಚಿನ ಎಂಎನ್‌ಸಿ ಕಂಪೆನಿಗಳಲ್ಲಿ ಜನವರಿ, ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ನೀವು ಕೆಲಸದ ಅವಕಾಶಗಳಿಗಾಗಿ ಅನ್ವೇಷಿಸಲು ಹಲವು ಕಾರಣಗಳಿವೆ. ಏಕೆಂದರೆ ಇದು ವಾರ್ಷಿಕ ಬಜೆಟ್ ಅನ್ನು ನಿರ್ಧರಿಸುವ ಸಮಯ ಮತ್ತು ಮುಂದಿನ ವರ್ಷದ ಅವಶ್ಯಕತೆಗಳನ್ನು ಅಂದಾಜಿಸಲಾಗುತ್ತದೆ.
ಖಾಲಿ ಹುದ್ದೆಗಳಿದ್ದಲ್ಲಿ ಅಥವಾ ಹೊಸ ಸಂಪನ್ಮೂಲಗಳು ಅಗತ್ಯವಿದ್ದರೆ, ರಜಾದಿನಗಳು ಮುಗಿದ ನಂತರ ಸಂಬಂಧಪಟ್ಟ ಇಲಾಖೆಗಳು ಅಭ್ಯರ್ಥಿಗಳ ಹುಡುಕಾಟವನ್ನು ಪ್ರಾರಂಭಿಸುತ್ತವೆ.
ಎಪ್ರಿಲ್‌, ಮೇ, ಮತ್ತು ಜೂನ್‌ (ಉತ್ತಮ ಸಮಯ)

ಮಾರ್ಚ್ ನಲ್ಲಿ  ಹಣಕಾಸು ವರ್ಷವು ಕೊನೆಗೊಳ್ಳುವ ಕಂಪನಿಗಳಲ್ಲಿ, ವಿಶೇಷವಾಗಿ ಭಾರತೀಯ ಕಂಪೆನಿಗಳಲ್ಲಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಇದು ಉತ್ತಮ ಅವಧಿಯಾಗಿದೆ. ಅಲ್ಲದೆ, ಬಹಳಷ್ಟು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಹಣಕಾಸಿನ ವರ್ಷದ ಕೊನೆಯಲ್ಲಿ ವಾರ್ಷಿಕ ಪ್ರಯೋಜನಗಳನ್ನು ಅಥವಾ ಬೋನಸ್‌ಗಳನ್ನು ನೀಡುತ್ತವೆ ಎಂಬುದನ್ನು ನಾವು ಮರೆಯಬಾರದು.
ಇದರರ್ಥ ಈಗಾಗಲೇ ಕೆಲಸ ಬಿಡುವ ಯೋಚನೆಯಲ್ಲಿರುವವರು  ಬಾಕಿ ಹಣವನ್ನು ಪಡೆದ ನಂತರ ಕೆಲಸ ಬಿಡುವ ಸಾಧ್ಯತೆ ಹೆಚ್ಚು. ಹಳೆಯ ಉದ್ಯೋಗಿಗಳು ಬೇರೆ ಕಂಪೆನಿಗಳಿಗೆ ಸೇರಲು ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟ ನಂತರ  ಕಂಪನಿಗಳಲ್ಲಿ ಹೆಚ್ಚಿನ ಖಾಲಿ ಹುದ್ದೆಗಳು ಸೃಷ್ಟಿಯಾಗುತ್ತವೆ.
ಜುಲೈ, ಆಗಸ್ಟ್‌ ಮತ್ತು ಸೆಪ್ಟೆಂಬರ್‌ ( ಸೂಕ್ತವಲ್ಲದ ಸಮಯ)

ವರ್ಷದ ಮಧ್ಯದಲ್ಲಿ ಸಾಮಾನ್ಯವಾಗಿ ಹೊಸ ಉದ್ಯೋಗವನ್ನು ಹುಡುಕಲು ಹೆಚ್ಚು ಸೂಕ್ತವಾದ  ಸಮಯವಲ್ಲ. ಕಂಪನಿಗಳು ವರ್ಷದ ಆರಂಭದಲ್ಲಿ ಹೆಚ್ಚಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತವೆ ಮತ್ತು ಪ್ರಮೋಶನ್‌ಗಳು ಹೆಚ್ಚಾಗಿ ಈ ಅವಧಿಯಲ್ಲಿ ನಡೆಯುತ್ತವೆ.
 ವರ್ಷದ ಮಧ್ಯದಲ್ಲಿ  ಒಬ್ಬ ವ್ಯಕ್ತಿಯು ತನ್ನ ಕೆಲಸವನ್ನು ಬಿಡುವ ಸಾಧ್ಯತೆ ಕಡಿಮೆ, ಕಂಪೆನಿಯಲ್ಲಿ ಅತಿಯಾದ ಒತ್ತಡವಿದ್ದು ಮತ್ತು ಇರುವ ಕಂಪೆನಿಯಲ್ಲಿ ಸಿಗುವ ಸಂಬಳಕ್ಕಿಂತ ಹೆಚ್ಚಿನ ಸಂಬಳದ ಆಫರ್‌ ಬಂದರೆ ಅಷ್ಟೇ ವ್ಯಕ್ತಿ ಮಧ್ಯದಲ್ಲಿ ಕೆಲಸ ಬಿಡುವುದು.
ಈ ಎಲ್ಲ ಕಾರಣಗಳು ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳು ತುಂಬಾ ಸೂಕ್ತವಲ್ಲ.
ಸಿಲ್ವರ್ ಲೈನಿಂಗ್ ಎಂದರೆ ಹೆಚ್ಚಿನ ಜನರಿಗೆ ತಿಳಿದಿದೆ ಮತ್ತು ಸಾಮಾನ್ಯವಾಗಿ ಜನರು ಈ ಸಮಯದಲ್ಲಿ ಉದ್ಯೋಗಗಳನ್ನು ಹುಡುಕುವುದಿಲ್ಲ – ಇದರರ್ಥ ಸ್ಪರ್ಧೆಯು ಅತ್ಯಂತ ಕಡಿಮೆ ಮತ್ತು ಯಾವುದೇ ಖಾಲಿ ಹುದ್ದೆಗಳಿದ್ದರೆ, ನಿಮ್ಮ ಅವಕಾಶವನ್ನು ಕಸಿದುಕೊಳ್ಳುವ ಸಾಧ್ಯತೆಯೂ ಹೆಚ್ಚು.
ಅಕ್ಟೋಬರ್‌, ನವೆಂಬರ್‌ ಮತ್ತು ಡಿಸೆಂಬರ್‌ (ತಕ್ಕಮಟ್ಟಿಗೆ ಉತ್ತಮವಾದ)

ಇದು ಹಬ್ಬಗಳ ಅವಧಿ-ದಸರಾ, ದೀಪಾವಳಿ, ಕ್ರಿಸ್‌ಮಸ್, ಹೊಸ ವರ್ಷ ಇತ್ಯಾದಿ. ಜನರು ಹೆಚ್ಚು ಆರಾಮವಾಗಿರುತ್ತಾರೆ ಮತ್ತು ನೌಕರರು ತಮ್ಮ ವಾರ್ಷಿಕ ರಜೆಗಳನ್ನು ತೆಗೆದುಕೊಳ್ಳುವ ಸಮಯವೂ ಆಗುತ್ತದೆ, ಈ ಸಮಯದಲ್ಲಿ  ಕೆಲಸ ಬಹುತೇಕ ಸ್ಥಗಿತಗೊಳ್ಳುತ್ತದೆ.

ಆದಾಗ್ಯೂ, ವರ್ಷವು ಮುಗಿಯಲಿರುವ ಕಾರಣ, ಸಂಬಂಧಪಟ್ಟ ಇಲಾಖೆಯು ಈಗಾಗಲೇ ಮುಂದಿನ ವರ್ಷದ ಅವಶ್ಯಕತೆಗಳಿಗಾಗಿ ಯೋಜನೆಗಳನ್ನು ರೂಪಿಸುತ್ತಿದೆ. ನಿಮ್ಮ ಕೆಲಸದ ಹುಡುಕಾಟಕ್ಕೆ ಸೂಕ್ತ   ವ್ಯಕ್ತಿಗಳೊಂದಿಗೆ ನಿಮ್ಮ ನೆಟ್‌ವರ್ಕಿಂಗ್ ಮಾಡಲು ಮತ್ತು ಶೀಘ್ರದಲ್ಲೇ ಯಾವುದಾದರೂ ಖಾಲಿ ಹುದ್ದೆಗಳಿವೆಯೇ ಎಂದು ಕೇಳಲು ಇದು ಅತ್ಯುತ್ತಮ ಸಮಯ.

ಇದಕ್ಕೆ ಅಗತ್ಯವಿರುವ ಕಾರ್ಯಯೋಜನೆಗಳನ್ನು ರೂಪಿಸಿಕೊಳ್ಳಲು  ಈ ತಿಂಗಳುಗಳನ್ನು ಬಳಸಿಕೊಳ್ಳಿ ಮತ್ತು ಸರಿಯಾದ ಸಮಯ ಬಂದಾಗ, ನೀವು ಅವಕಾಶಗಳನ್ನು ಅನ್ವೇಷಿಸಲು ಸಿದ್ಧರಾಗಿರುತ್ತೀರಿ. ಒಳ್ಳೆಯದಾಗಲಿ!

LEAVE A REPLY

Please enter your comment!
Please enter your name here