ಕೆಲಸಕ್ಕಾಗಿ ಬೇರೆ ಜಿಲ್ಲೆಗಳಿಗೆ ಹೋಗಲು ಅನುಮತಿ – ರಾಜ್ಯ ಸರ್ಕಾರದ ಆದೇಶ – ಸಂಪೂರ್ಣ ಮಾಹಿತಿ ಇಲ್ಲಿದೆ

ಕೆಲಸದ ಉದ್ದೇಶಕ್ಕಾಗಿ ಬೇರೆ ಜಿಲ್ಲೆಗಳಿಗೆ ಹೋಗಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ ಪಾಸ್‌ ಪಡೆಯುವುದು ಕಡ್ಡಾಯವಾಗಿದೆ. ಇದು ಏಕಮುಖ ಒಂದು ದಿನ ಪಾಸ್‌ ಆಗಿರುತ್ತದೆ.

ಅಂದರೆ ಕೆಲಸದ ಉದ್ದೇಶಕ್ಕಾಗಿ ಈಗ ತಾವಿರುವ ಜಾಗದಿಂದ ಬೇರೆ ಜಿಲ್ಲೆಗೆ ಹೋಗುವವರು ತಮಗೆ ನೀಡಲಾದ ಪಾಸ್‌ನಲ್ಲಿ ಒಂದು ದಿನದ ಮಟ್ಟಿಗಷ್ಟೇ ಓಡಾಡಬಹುದು.

ಇವತ್ತಿನಿಂದ ಆನ್‌ಲೈನ್‌ ಮೂಲಕವೇ ಪಾಸ್‌ ವಿತರಣೆಯನ್ನು ಮಾಡಲಾಗುತ್ತದೆ. ಅದರ ಲಿಂಕ್‌ ಇಲ್ಲಿದೆ.  ಬಣ್ಣದ ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.

bit.ly/dkdicepass (ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರಡುವವರಿಗೆ ಮಾತ್ರ ಈ ಲಿಂಕ್‌)

ಕೆಲಸದ ಉದ್ದೇಶಕ್ಕಾಗಿ ಜಿಲ್ಲೆಗಳ ನಡುವೆ ಓಡಾಟಕ್ಕೆ ಅನುಮತಿ ನೀಡಿ ಮುಖ್ಯ ಕಾರ್ಯದರ್ಶಿ ವಿಜಯ್‌ ಭಾಸ್ಕರ್‌ ಆದೇಶ ಹೊರಡಿಸಿದ್ದಾರೆ.

ಷರತ್ತುಗಳು ಹೀಗಿವೆ:

೧) ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯನ್ನು ಒಂದೇ ಘಟಕವಾಗಿ ಪರಿಗಣಿಸಲಾಗಿದೆ. ಹಾಗಾಗಿ ಈ ಜಿಲ್ಲೆಗಳ ನಡುವೆ ಕೆಲಸಗಳಿಗೆ ಹೋಗುವವರಿಗೆ ಪಾಸ್‌ನ ಅಗತ್ಯವಿಲ್ಲ. ಈ ಜಿಲ್ಲೆಗಳ ನಡುವೆ ಕೆಲಸಕ್ಕಾಗಿ ಓಡಾಡುವವರು ಅವರು ಕೆಲಸ ಮಾಡುವ ಸಂಸ್ಥೆ ಕೊಟ್ಟಿರುವ ಪತ್ರ ಮತ್ತು ಗುರುತಿನ ಚೀಟಿಯನ್ನು ಹೊಂದಿದ್ದರೆ ಸಾಕು.

೨) ಮೇಲೆ ಹೇಳಿದ ಐದು ಜಿಲ್ಲೆಗಳನ್ನು ಬಿಟ್ಟು ಉಳಿದ ಜಿಲ್ಲೆಗಳಿಂದ ಬರುವವರು ಮತ್ತು ಹೋಗುವವರು ಕಡ್ಡಾಯವಾಗಿ ಪಾಸ್‌ ಪಡೆಯಲೇಬೇಕು.

೩) ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಪಾಸ್‌ಗಳನ್ನು ನೀಡಲಾಗುತ್ತದೆ.

೪) ಲಾಕ್‌ಡೌನ್‌ನಿಂದ ವಿನಾಯ್ತಿ ನೀಡಲಾದ ಚಟುವಟಿಕೆಗಳಿಗೆ ಕೆಲಸಕ್ಕೆ ಹೋಗುವವರಿಗೆ ಮಾತ್ರ ಜಿಲ್ಲೆಗಳ ನಡುವೆ ಓಡಾಟಕ್ಕೆ ಅನುಮತಿ ನೀಡಲಾಗಿದೆ.

೫) ಸಂಜೆ ೭ರಿಂದ ಬೆಳಗ್ಗೆ ೭ ಗಂಟೆವರೆಗೆ ಅಗನತ್ಯ ಓಡಾಟವನ್ನು ಯಾರೂ ಮಾಡುವಂತಿಲ್ಲ. ರೆಡ್‌ ಝೋನ್‌, ಆರೆಂಜ್‌ಝೋನ್‌ ಮತ್ತು ಗ್ರೀನ್‌ಜೋನ್‌ನಲ್ಲಿ ಜನರ ಓಡಾಟಕ್ಕೆ ೧೨ ಗಂಟೆಗಳ ನಿರ್ಬಂಧ ಹೇರಲಾಗಿದೆ.

1 COMMENT

LEAVE A REPLY

Please enter your comment!
Please enter your name here