ಕೆರೆಬಿಯನ್ನರಿಗೆ ಕುಲದೀಪ್‌ ಖೆಡ್ಡಾ – ೮ರ ಸೋಲಿಗೆ ೧೦೭ರ ಜಯದ ಪ್ರತೀಕಾರ

ಕುಲದೀಪ್‌ ಯಾದವ್‌ ಹ್ಯಾಟ್ರಿಕ್‌ ವಿಕೆಟ್‌ ಅಬ್ಬರಕ್ಕೆ ನೆಲಕಚ್ಚಿದ ವಿಂಡೀಸ್‌ನ್ನು ಭಾರತ ಬರೋಬ್ಬರೀ ೧೦೭ ರನ್‌ಗಳಿಂದ ಸೋಲಿಸಿ ಮೊದಲ ಏಕದಿನ ಸೋಲಿಗೆ ಸೇಡು ತೀರಿಸಿಕೊಂಡಿದೆ. ವಿಶಾಖಪಟ್ಟಣದಲ್ಲಿ ನಡೆದ ೨ನೇ ಏಕದಿನ ಪಂದ್ಯದಲ್ಲಿ ೨೮೮ ರನ್‌ಗಳ ಬೃಹತ್‌ ಗುರಿ ಬೆನ್ನಟ್ಟಿದ ಕೆರೆಬಿಯನ್ನರು ಕೇವಲ ೪೩.೩ ಓವರ್‌ಗಳಲ್ಲೇ ೨೮೦ ರನ್‌ಗೆ ಆಲೌಟಾಯಿತು.

೩೩ನೇ ಓವರ್‌ನಲ್ಲಿ ಕೆರೆಬಿಯನ್‌ ಪಾಳಯದ ಶೈ ಹೋಪ್‌, ಜಸನ್‌ ಹೋಲ್ಡರ್‌, ಅಲ್‌ಝಾರಿ ಜೋಸೆಫ್‌ ವಿಕೆಟ್‌ ಕಬಳಿಸಿ ಏಕದಿನ ಪಂದ್ಯದಲ್ಲಿ ೨ನೇ ಬಾರಿಗೆ ಹ್ಯಾಟ್ರಿಕ್‌ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್‌ ಎನಿಸಿಕೊಂಡರು.

೨೦೧೭ರಲ್ಲಿ ಕೋಲ್ಕತ್ತಾದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮೊದಲ ಬಾರಿಗೆ ಕುಲದೀಪ್‌ ಮ್ಯಾಥ್ಯೂ ವೇಡ್‌, ಅಸ್ಟನ್‌ ಅಗರ್‌ ಮತ್ತು ಪ್ಯಾಟ್‌ ಕಮ್ಮಿನ್ಸ್‌ ವಿಕೆಟ್‌ ಕಬಳಿಸಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದರು.

ವಿಂಡೀಸ್‌ ಪರ ಎವಿನ್‌ ಲೆವಿಸ್‌ ೩೦, ಶೈ ಹೋಪ್‌ ೭೮, ನಿಕೋಲಸ್‌ ಪೋರನ್‌ ೭೫, ಕೀಮೋ ಪೌಲ್‌ ೪೬ ರನ್‌ಗಳನ್ನ ಗಳಿಸಿದರು.

ವೇಗಿ ಮೊಹಮ್ಮದ್‌ ಶಮಿ ೩, ರವೀಂದ್ರ ಜಡೇಜಾ ೨, ಶಾರ್ದೂಲ್‌ ಠಾಕೂರ್‌ ೧ ವಿಕೆಟ್‌ ಕಬಳಿಸಿದರು.

ಮೊದಲು ಬ್ಯಾಟ್‌ ಮಾಡಿದ ಭಾರತದ ಪರ ಆರಂಭಿಕ ಆಟಗಾರರಾದ ಕೆ ಎಲ್‌ ರಾಹುಲ್‌ ಮತ್ತು ರೋಹಿತ್‌ ಶರ್ಮಾ ಅಬ್ಬರಿಸಿ ಭದ್ರ ಬುನಾದಿ ಹಾಕಿದರು.

ಕನ್ನಡಿಗ ಕೆ ಎಲ್‌ ರಾಹುಲ್‌ ೧೦೪ ಎಸೆತಗಳಲ್ಲಿ ಮೂರು ಸಿಕ್ಸ್‌ ಮತ್ತು ಎಂಟು ಬೌಂಡರಿಗಳ ಮೂಲಕ ೧೦೨ ರನ್‌ಗಳನ್ನು ಸಿಡಿಸಿ ಟೀಂ ಇಂಡಿಯಾದ ಬೃಹತ್‌ ಮೊತ್ತಕ್ಕೆ ಬುನಾದಿ ಹಾಕಿದರು.

ಆರಂಭಿಕ ಆಟಗಾರ ರೋಹಿತ್‌ ಶರ್ಮಾ ೧೩೮ ಎಸೆತಗಳಲ್ಲಿ ೧೫೮ ರನ್‌ಗಳನ್ನು ಚಚ್ಚಿದರು. ೫ ಸಿಕ್ಸರ್‌ ಮತ್ತು ೧೭ ಬೌಂಡರಿಗಳನ್ನು ಬಾರಿಸಿದರ. ಮೊದಲ ವಿಕೆಟ್‌ಗೆ ರೋಹಿತ್‌ ಶರ್ಮಾ ಮತ್ತು ರಾಹುಲ್‌ ಜೋಡಿ ೨೨೭ ರನ್‌ಗಳನ್ನು ಗಳಿಸಿತು.

ಮತ್ತೋರ್ವ ಕನ್ನಡಿಗ ಶ್ರೇಯಸ್‌ ಅಯ್ಯರ್‌ ೫೩, ರಿಷಭ್‌ ಪಂತ್‌ ೩೯, ಕೇದಾರ್‌ ಜಾಧವ್‌ ೧೬ ರನ್‌ ಗಳಿಸಿದರು. ನಾಯಕ ವಿರಾಟ್‌ ಕೊಹ್ಲಿ ಸೊನ್ನೆ ಸುತ್ತಿದರು.

ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿಂಡೀಸ್‌ ಎದುರು ೮ ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತ್ತು.

LEAVE A REPLY

Please enter your comment!
Please enter your name here