ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿಕೆಶಿಗೆ ಸಿಎಂ ಬಿಎಸ್‌ವೈ ಫೋನ್‌ – ಪದಗ್ರಹಣಕ್ಕೆ ಒಪ್ಪಿಗೆ

Paycm ಪೋಸ್ಟರ್

ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಪದಗ್ರಹಣ ಕಾರ್ಯಕ್ರಮ ಸಂಬಂಧ ಡಿಕೆಶಿ ಜೊತೆ ಮಾತಾಡಿರುವ ಸಿಎಂ ಯಡಿಯೂರಪ್ಪ ಲಾಕ್‌ಡೌನ್‌ ಮಾರ್ಗಸೂಚಿ ಪಾಲಿಸಿ ಪದಗ್ರಹಣ ಕಾರ್ಯಕ್ರಮ ನಡೆಸಬಹುದು ಎಂದು ಹೇಳಿದ್ದಾರೆ.

ಈ ಮೂಲಕ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದ್ದ ಬಳಿಕ ಭುಗಿಲೆದ್ದಿದ್ದ ಬಿಜೆಪಿ-ಕಾಂಗ್ರೆಸ್‌ ನಡುವಿನ ವಾಕ್ಸಮರಕ್ಕೆ ತಾತ್ಕಾಲಿಕ ವಿರಾಮ ಸಿಗುವ ಸಾಧ್ಯತೆ ಇದೆ.

ವಿಧಾನಸೌಧದಲ್ಲಿ ಮಾತಾಡಿದ ಸಿಎಂ ಬಿಎಸ್‌ವೈ

ಡಿ ಕೆ ಶಿವಕುಮಾರ್‌ ಅವರು ಕಾರ್ಯಕ್ರಮ ಮಾಡಲು ನಮಗೇನು ಅಭ್ಯಂತರ ಇಲ್ಲ. ಅವರು ಯಾವಾಗ ಬೇಕಾದರೂ ಮಾಡಿಕೊಳ್ಳಲಿ. ಕೊರೋನಾ ಇರುವ ಕಾರಣ ಹೆಚ್ಚು ಜನ ಸೇರುವಂತಿಲ್ಲ. ನಿಯಮಗಳನ್ನು ಪಾಲಿಸಿ ಪದಗ್ರಹಣ ಮಾಡಿಕೊಳ್ಳಲಿ. ನಿನ್ನೆಯೇ ಡಿ ಕೆ ಶಿವಕುಮಾರ್‌ ಅವರ ಜೊತೆಗೆ ದೂರವಾಣಿ ಮೂಲಕ ಮಾತಾಡಿದ್ದೇನೆ. ಅಗತ್ಯ ಮುಂಜಾಗ್ರತ ಕ್ರಮಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ. ಹೆಚ್ಚು ಜನ ಸೇರಿಸದೇ ಪದಗ್ರಹಣ ಕಾರ್ಯಕ್ರಮ ಮಾಡಿಕೊಳ್ಳಲಿ

ಎಂದು ಸಿಎಂ ಬಿಎಸ್‌ವೈ ಹೇಳಿದ್ದಾರೆ.

ಇದೇ ಭಾನುವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ೧೫೦ ಮಂದಿಯ ಸಮ್ಮುಖದಲ್ಲಿ ಪದಗ್ರಹಣಕ್ಕೆ ಡಿ ಕೆ ಶಿವಕುಮಾರ್‌ ನಿರ್ಧರಿಸಿದ್ದರು. ಅಲ್ಲದೇ ಈ ಕಾರ್ಯಕ್ರಮವನ್ನು ಟಿವಿ ಪರದೆಗಳ ಮೂಲಕ‌ ರಾಜ್ಯದ ನಾನಾ ಭಾಗಗಳಲ್ಲಿರುವ ಕಾಂಗ್ರೆಸ್‌ ಕಾರ್ಯಕರ್ತರಿಗೆ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತಿದೆ.

LEAVE A REPLY

Please enter your comment!
Please enter your name here