ಕೆಎಸ್‌ಒಯು ಮೂಲಕ ಮಾತ್ರ ಇನ್ಮುಂದೆ ದೂರಶಿಕ್ಷಣ – ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ

ಕರ್ನಾಟಕದಲ್ಲಿ ಇನ್ಮುಂದೆ ಮೈಸೂರಲ್ಲಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಮಾತ್ರ ರಾಜ್ಯದಲ್ಲಿ ದೂರಶಿಕ್ಷಣ ನೀಡಲಿದೆ. ಇವತ್ತು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ.

ಸಂಪುಟ ಸಭೆಯ ಬಳಿಕ ಮಾತಾಡಿದ ಸಂಸದೀಯ ವ್ಯವಹಾರ ಮತ್ತು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಕರ್ನಾಟಕ ಮುಕ್ತ ವಿವಿ ಮೂಲಕ ಮಾತ್ರ ರಾಜ್ಯದಲ್ಲಿ ದೂರಶಿಕ್ಷಣ ನೀಡುವುದಕ್ಕೆ ತೀರ್ಮಾನಿಸಲಾಗಿದೆ ಎಂದರು.

ಬೆಂಗಳೂರು ಸೆಂಟ್ರಲ್‌ ಯೂನಿವರ್ಸಿಟಿಯ ಹೆಸರನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯವಾಗಿ ಮರು ನಾಮಕರಣ ಮಾಡಲಾಗುತ್ತದೆ. ಬೆಂಗಳೂರು ವಿವಿಯಿಂದ ಸರ್ಕಾರಿ ವಿಜ್ಞಾನ ಕಾಲೇಜನ್ನು ಪ್ರತ್ಯೇಕಿಸಿ ನೃಪತುಂಗ ವಿವಿಯಾಗಿ ಸ್ವಾಯತ್ತತೆ ನೀಡಲಾಗುತ್ತದೆ ಎಂದು ಸಚಿವರು ಹೇಳಿದರು.

ಬೆಂಗಳೂರಲ್ಲಿರುವ ವಿಜ್ಞಾನ ಗ್ಯಾಲರಿಗೆ 20 ಕೋಟಿ ರೂಪಾಯಿ ನೀಡುವುದಕ್ಕೆ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಹಾಸನ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತೋಟಗಾರಿಕಾ ಕಾಲೇಜು ತೆರೆಯುವ ಬಗ್ಗೆ ಮುಂದಿನ ಕ್ಯಾಬಿನೆಟ್‌ ಸಭೆಯಲ್ಲಿ ಚರ್ಚಿಸಲಾಗುತ್ತದೆ.

LEAVE A REPLY

Please enter your comment!
Please enter your name here