ಕುಸಿದ ಭಾರತದ ಆರ್ಥಿಕತೆ – ಕರೆಂಟ್‌ಗೂ ಕಡಿಮೆ ಆದ ಬೇಡಿಕೆ

ಭಾರತದಲ್ಲಿ ಆರ್ಥಿಕ ಕುಸಿತ ಆಗಿದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ದೇಶದಲ್ಲಿ ವಿದ್ಯುತ್‌ಗೆ ಇರುವ ಬೇಡಿಕೆ ಇಳಿಮುಖವಾಗಿದೆ. ೨೦೧೯ರ ಡಿಸೆಂಬರ್‌ ತಿಂಗಳಲ್ಲಿ ಕರೆಂಟ್‌ ಬೇಡಿಕೆ ಶೇಕಡಾ 1.1ರಷ್ಟು ಕಡಿಮೆ ಆಗಿದ್ದು, 101.92 ಬಿಲಿಯನ್‌ ಯುನಿಟ್‌ಗೆ ಕುಸಿದಿದೆ.

೨೦೧೮ರಲ್ಲಿ ಇದೇ ಅವಧಿಯಲ್ಲಿ 103.4 ಬಿಲಿಯನ್‌ ಯುನಿನ್‌ನಷ್ಟು ವಿದ್ಯುತ್‌ ಪೂರೈಕೆ ಆಗಿತ್ತು.

ದೇಶದಲ್ಲಿ ಸತತ ಐದನೇ ತಿಂಗಳಲ್ಲಿ ವಿದ್ಯುತ್‌ ಪೊರೈಕೆ ಇಳಿಕೆ ಆಗಿದೆ ಎನ್ನುವುದು ಚಿಂತೆಯ ವಿಷಯವಾಗಿದೆ. ನವೆಂಬರ್‌ನಲ್ಲಿ ಶೇಕಡಾ 4.2ರಷ್ಟು, ಅಕ್ಟೋಬರ್‌ನಲ್ಲಿ ಶೇಕಡಾ 12.8ರಷ್ಟು ವಿದ್ಯುತ್‌ ಬೇಡಿಕೆ ಕುಸಿದಿತ್ತು ಎಂದು ಕೇಂದ್ರೀಯ ವಿದ್ಯುತ್‌ ಪ್ರಾಧಿಕಾರದ ಅಂಕಿಅಂಶಗಳೇ ಹೇಳಿದ್ದವು.

ಅಕ್ಟೋಬರ್‌ನಲ್ಲಾದ ವಿದ್ಯುತ್‌ ಬೇಡಿಕೆಯಲ್ಲಿನ ಇಳಿಕೆ 12 ವರ್ಷಗಳಲ್ಲೇ ಆದ ಗಣನೀಯ ಕುಸಿತವಾಗಿದೆ.

ವಿದ್ಯುತ್‌ ಪೊರೈಕೆಯಲ್ಲಿ ಇಳಿಕೆಯ ಅರ್ಥ ದೇಶದಲ್ಲಿ ಕೈಗಾರಿಕಾ ಚಟುವಟಿಕೆಗಳು ಕುಂಠಿತಗೊಂಡು ಉತ್ಪಾದಕ ವಲಯದಲ್ಲಿ ಕುಸಿತವಾಗಿದೆ ಎನ್ನುವುದು. 5ನೇ ಎರಡರಷ್ಟು ವಿದ್ಯುತ್‌ನ್ನು ನಮ್ಮ ದೇಶದಲ್ಲಿ ಕೈಗಾರಿಕೆಗಳೇ ಬಳಸಿಕೊಳ್ತಿವೆ.

LEAVE A REPLY

Please enter your comment!
Please enter your name here