ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಜೂ.1 ರಿಂದ ದರ್ಶನಕ್ಕೆ ಅವಕಾಶ

ಜೂನ್‌ 1ರಿಂದ ರಾಜ್ಯದಲ್ಲಿ ಎಲ್ಲಾ ದೇವಸ್ಥಾನಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.

ಮುಜರಾಯಿ ಇಲಾಖೆ ಮಾರ್ಗಸೂಚಿಯಂತೆ ಕುದ್ರೋಳಿಯಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಜೂನ್ 1ರಂದು ತಾರೀಖು ಕ್ಷೇತ್ರದಲ್ಲಿ ಕೊರೋನಾ ರೋಗ ನಿರ್ಮೂಲನೆಗೆ ಧನ್ವಂತರಿ ಹೋಮ, ಸೀಯಾಳಾಭಿಷೇಕ ನಡೆಯಲಿದೆ.

ಮುಜರಾಯಿ ಇಲಾಖೆಯ ಗೈಡ್ ಲೈನ್ಸ್‌ಪಾಲನೆ ಮಾಡಲಾಗುತ್ತಿದ್ದು ದೇವಸ್ಥಾನ ಸಂಪೂರ್ಣ ಸ್ಯಾನಿಟೈಸೇಷನ್, ಸಾಮಾಜಿಕ ಅಂತರ, ಎಲ್ಲಾ ಭಕ್ತರಿಗೂ ಮಾಸ್ಕ್, ಮು‌ಂಜಾಗ್ರತಾ ಕ್ರಮದೊಂದಿಗೆ ದೇವಸ್ಥಾನ ತೆರೆಯಲಾಗುತ್ತಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

 

LEAVE A REPLY

Please enter your comment!
Please enter your name here