ಕಾಸು ಕೊಟ್ಟರೆ ಈ ದೇಶಗಳಲ್ಲಿ ನಾಗರಿಕತ್ವ ಪಡೆಯಬಹುದು..! – ಯಾವ ದೇಶದಲ್ಲಿ ಎಷ್ಟು..?

ಪಾಸ್‌ಪೋರ್ಟ್‌. ಅನ್ಯ ದೇಶಗಳಲ್ಲಿ ಅಲ್ಲಿನ ರಾಷ್ಟ್ರೀಯ ಸರ್ಕಾರಗಳು ವಾಸಿಸಲು ನೀಡುವ ಅನುಮತಿ ಪತ್ರ. ಜಗತ್ತಿನ ಹಲವಾರು ರಾಷ್ಟ್ರಗಳು ಪಾಸ್‌ಪೋರ್ಟ್‌ನ್ನು ದುಡ್ಡಿಗೂ ಮಾರಿಕೊಳ್ಳುತ್ತವೆ. ಅಂದರೆ ಇಂತಿಷ್ಟು ಎಂದು ಹೂಡಿಕೆ ಮಾಡಿದರೆ ಸಾಕು. ಅಂತಹ ರಾಷ್ಟ್ರಗಳ ಪಟ್ಟಿ ಇಲ್ಲಿದೆ ನೋಡಿ.

ಆಂಟಿಗುವಾ ಬಾರ್ಬುಡಾ:

ಈ ಆಫ್ರಿಕನ್‌ ದೇಶದಲ್ಲಿ ಉಳಿದುಕೊಳ್ಳಲು 2,50,000 ಅಮೆರಿಕನ್‌ ಡಾಲರ್‌ ಕನಿಷ್ಠ ಹೂಡಿಕೆ ಮಾಡಿದರೆ ಸಾಕು. ಐದು ವರ್ಷದಲ್ಲಿ ಕೇವಲ ಐದು ದಿನ ಉಳಿದುಕೊಂಡರೆ ಆಗ ಇಲ್ಲಿನ ಪೌರತ್ವ ಸಿಗುತ್ತದೆ. ಬ್ಯಾಂಕ್‌ ಲೂಟಿ ಪ್ರಕರಣದಲ್ಲಿ ಭಾರತ ಬಿಟ್ಟು ಓಡಿಹೋಗಿರುವ ನೀರವ್‌ ಮೋದಿಯ ಆಪ್ತ ಮೆಹುಲ್‌ ಚೋಸ್ಕಿ ಹೂಡಿಕೆ ಮೂಲಕ ಇದೇ ದೇಶದ ಪೌರತ್ವ ಪಡೆದಿದ್ದ.

ಕೆನಡಾ:

ಈ ರಾಷ್ಟ್ರದಲ್ಲಿ ನಾಗರಿಕತ್ವ ಪಡೆದುಕೊಳ್ಳಲು ಮಾಡಬೇಕಿರುವುದು 8 ಲಕ್ಷ ಅಮೆರಿಕನ್‌ ಡಾಲರ್‌ ಹೂಡಿಕೆ. ಐದು ವರ್ಷಗಳಲ್ಲಿ 730 ದಿನಗಳನ್ನು ಇಲ್ಲಿಯೇ ಕಳೆಯಬೇಕಾಗುತ್ತದೆ.

ಅಮೆರಿಕ:

ಅಮೆರಿಕದಲ್ಲಿ 5 ಲಕ್ಷ ಡಾಲರ್‌ ಹೂಡಿಕೆ ಮಾಡಬೇಕಾಗುತ್ತದೆ. ಜೊತೆಗೆ ವರ್ಷದಲ್ಲಿ 180 ದಿನಗಳು ಆ ರಾಷ್ಟ್ರದಲ್ಲಿ ಜೀವಿಸಬೇಕಾಗುತ್ತದೆ. ಆಗ ಅಮೆರಿಕದ ಪೌರತ್ವ ಪಡೆದುಕೊಳ್ಳಬಹುದು.

ಬ್ರಿಟನ್‌:

ಈ ದೇಶದ ನಾಗರಿಕ ಆಗ್ಬೇಕಾದ್ರೆ 5 ಲಕ್ಷ ಡಾಲರ್‌ ಹೂಡಿಕೆಯ ಜೊತೆಗೆ ಅಲ್ಲಿ ವರ್ಷಕ್ಕೆ 189 ದಿನ ವಾಸಿಸಬೇಕಾಗುತ್ತದೆ.

ಸ್ವಿಟ್ಜರ್ಲೆಂಡ್‌:

ಈ ಯುರೋಪ್‌ ಖಂಡದ ರಾಷ್ಟ್ರದ ನಾಗರಿಕತ್ವವನ್ನು ಪಡೆಯಲು ವರ್ಷಕ್ಕೆ 2,50,000 ಸ್ವಿಸ್‌ಫ್ರ್ಯಾಂಕ್‌ ಹೂಡಿಕೆ ಮಾಡಿದರೆ ಸಾಕು. ವರ್ಷದಲ್ಲಿ ಇಂತಿಷ್ಟೇ ದಿನ ವಾಸಿಸಬೇಕೆಂಬ ನಿಯಮವೇನಿಲ್ಲ.

ಪೋರ್ಚುಗಲ್‌:

ವರ್ಷಕ್ಕೆ ಕನಿಷ್ಠ 5 ಲಕ್ಷ ಪೌಂಡ್‌ ಬಂಡವಾಳ ಹೂಡಿದರೆ ಸಾಕು. ವರ್ಷಕ್ಕೆ 7 ದಿನ ಇಲ್ಲಿ ಉಳಿಯಬೇಕಾಗುತ್ತದೆ.

ಸ್ಪೇನ್‌:

ಸ್ಪೇನ್‌ನಲ್ಲಿ 5 ಲಕ್ಷ ಪೌಂಡ್‌ ಹೂಡಿಕೆ ಮಾಡಿದರೆ ಅಲ್ಲಿನ ಪೌರತ್ವ ಸಿಗಬೇಕಾಗುತ್ತದೆ. ಇಲ್ಲಿ ಇಷ್ಟೇ ದಿನ ವಾಸಿಸಬೇಕೆಂಬ ನಿಯಮವಿಲ್ಲ.

ಫ್ರಾನ್ಸ್:‌

ಫ್ರಾನ್ಸ್‌ನಲ್ಲಿ ನಾಗರಿಕತ್ವ ಬೇಕಾದರೆ 1 ಕೋಟಿ ಪೌಂಡ್‌ ಹೂಡಿಕೆ ಮಾಡಿದರೆ ಸಾಕು. ಇಂತಿಷ್ಟೇ ದಿನ ವಾಸಿಸಬೇಕಾದ ಷರತ್ತುಗಳಿಲ್ಲ.

ನ್ಯೂಜಿಲೆಂಡ್‌:

15 ಲಕ್ಷ ನ್ಯೂಜಿಲೆಂಡ್‌ ಡಾಲರ್‌ ಹೂಡಿಕೆ ಮಾಡಿದರೆ ಮತ್ತು ವರ್ಷದಲ್ಲಿ 149 ದಿನಗಳನ್ನು ಇಲ್ಲಿ ಕಳೆದರೆ ಪೌರತ್ವ ಸಿಕ್ಕೇಬಿಡುತ್ತದೆ.

ಆಸ್ಟ್ರೇಲಿಯಾ:

50 ಲಕ್ಷ ಆಸ್ಟ್ರೇಲಿಯಾ ಡಾಲರ್‌ನ್ನು ಹೂಡಿಕೆ ಮಾಡಿದರೆ ಮತ್ತು ವರ್ಷಕ್ಕೆ 40 ದಿನ ವಾಸಿಸಿದರೆ ಆಗ ಆಸ್ಟ್ರೇಲಿಯಾದ ನಾಗರಿಕ ಆಗಬಹುದು.

ವಿವರಣೆ:

ಅಮೆರಿಕನ್‌ ಡಾಲರ್‌ – 71 ರೂಪಾಯಿ

ಆಸ್ಟ್ರೇಲಿಯಾ ಡಾಲರ್‌ – 44 ರೂಪಾಯಿ

ನ್ಯೂಜಿಲೆಂಡ್‌ ಡಾಲರ್‌ – 47 ರೂಪಾಯಿ

ಪೌಂಡ್‌ – 92 ರೂಪಾಯಿ

ಸ್ವಿಸ್‌ ಫ್ರ್ಯಾಂಕ್‌ – 73 ರೂಪಾಯಿ

LEAVE A REPLY

Please enter your comment!
Please enter your name here