ರೈತರ ಜಮೀನಿಗೆ ಕಾವೇರಿ ನೀರು ಬಿಡುವ ಅಧಿಕಾರ ನಮ್ಮ ಬಳಿ ಇಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಮಹತ್ವದ ಹೇಳಿಕೆ ನೀಡಿದ್ದಾರೆ.

ಕೆಆರ್‌ಎಸ್‌, ಕಬಿನಿ ಸೇರಿದಂತೆ ಕಾವೇರಿಕೊಳ್ಳದ ಡ್ಯಾಂ ಮತ್ತು ಕಾವೇರಿ ನೀರಿನ ಬಗ್ಗೆ ವಿವಾದವಿದೆ. ಹೀಗಾಗಿ ಈ ಡ್ಯಾಂಗಳಿಂದ ನೀರು ಹರಿಸುವ ಅಧಿಕಾರ ನಮಗೆ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಜಾರಕಿಹೊಳಿ ಹೇಳಿದ್ದಾರೆ.

ಕಾವೇರಿ ನಿರ್ವಹಣಾ ಪ್ರಾಧಿಕಾರ ಸ್ಥಾಪನೆ ಆದ ಬಳಿಕ ರಾಜ್ಯ ಸರ್ಕಾರದ ಜಲಸಂಪನ್ಮೂಲ ಸಚಿವರಿಂದ ಬಂದಿರುವ ಈ ರೀತಿಯ ಮೊದಲ ಅಧಿಕೃತ ಹೇಳಿಕೆ ಇದಾಗಿದೆ.

ಜಲಾಶಯಗಳಲ್ಲಿನ ಸ್ಥಿತಿ ನೋಡಿಕೊಂಡು ನೀರು ಬಿಡುವ ಬಗ್ಗೆ ಪ್ರಾಧಿಕಾರವೇ ತೀರ್ಮಾನ ಕೈಗೊಳ್ಳುತ್ತದೆ ಎಂದು ಜಾರಕಿಹೊಳಿ ಹೇಳಿದ್ದಾರೆ.

ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರದ ಸಭೆ ನಡೆದಿದೆ. ಅಧಿಕಾರಿಗಳ ಸಭೆಯಲ್ಲಿ ಯಾವಾಗ ನೀರು ಬಿಡಬೇಕು ಎಂಬುದು ಚರ್ಚೆಯಾಗಿದೆ. ಹಾಗೆಯೇ ಜಲಾಶಯಗಳ ಸ್ಥಿತಿಗತಿ ನೋಡಿಕೊಂಡು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಮೈಸೂರಿನ ಸುತ್ತೂರು ಮಠದಲ್ಲಿ ಜಾರಕಿಹೊಳಿ ಹೇಳಿದ್ದಾರೆ.

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಸ್ವತಂತ್ರವಾಗಿದ್ದ ಕಾವೇರಿ ನಿರ್ವಹಣಾ ಪ್ರಾಧಿಕಾರವನ್ನು ಕೇಂದ್ರ ಜಲಶಕ್ತಿ ಸಚಿವಾಲಯದಡಿ ತಂದು ಆದೇಶ ಹೊರಡಿಸಿತ್ತು.

LEAVE A REPLY

Please enter your comment!
Please enter your name here