ಕಾರ್ಕಳ: ತೆರೆದ ಬಾವಿ ಕಾಮಗಾರಿ ವೀಕ್ಷಣೆ

       ಫಿಶರೀಸ್ ಕಾಲನಿಯಲ್ಲಿ ತೆರೆದ ಬಾವಿಯ ಕಾಮಗಾರಿಯನ್ನು ವೀಕ್ಷಿಸುತ್ತಿರುವ ಪುರಸಭಾ ಸದಸ್ಯರಾದ ಪ್ರದೀಪ್ ಕುಮಾರ್

ಕಾರ್ಕಳ ಪುರಸಭೆ ವ್ಯಾಪ್ತಿಯ 13 ನೇ ವಾರ್ಡಿನ ಫಿಶರೀಸ್ ಕಾಲನಿಯಲ್ಲಿ ನೀರಿನ ಬವಣೆ ಕಂಡು ನಿವಾಸಿಗಳಿಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಶಾಸಕರ ನಿಧಿ ಹಾಗೂ ಪುರಸಭೆಯ ಅನುದಾನದೊಂದಿಗೆ ಸುಮಾರು 3,60,000 ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕುಡಿಯುವ ನೀರಿನ ತೆರೆದ ಬಾವಿ ಕಾಮಗಾರಿ ವೀಕ್ಷಣೆಯನ್ನು ಪುರಸಭಾ ಸದಸ್ಯರಾದ ಪ್ರದೀಪ್ ಕುಮಾರ್ ಅವರು ಸೋಮವಾರ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಸುಮಾ ಕೇಶವ,ಪುರಸಭೆ ಇಂಜಿನಿಯರ್ ಪದ್ಮನಾಭ್, ಮಾಜಿ ಪುರಸಭಾ ಸದಸ್ಯರಾದ ಪ್ರಕಾಶ್ ರಾವ್, ನಿರಂಜನ್ ಜೈನ್, ರತ್ನವರ್ಮ ಅಜ್ರಿ, ಅಶೋಕ್ ಜೈನ್, ಸಂತೋಷ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ತೆರೆದ ಬಾವಿಯ ಕಾಮಗಾರಿಯು ಜೂನ್‌ ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ.

LEAVE A REPLY

Please enter your comment!
Please enter your name here