ಕಾರ್ಕಳ: ಜೈನ್ ಬ್ರಿಗೇಡ್ ನ ವತಿಯಿಂದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ

ಇತ್ತೀಚೆಗೆ ಜಿನೈಕ್ಯರಾದ ಶ್ರವಣಬೆಳಗೊಳ ಜೈನ ಮಠದ ಪೂಜ್ಯ ಗುರುಗಳಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ  ಕಾರ್ಕಳ ಜೈನ್ ಬ್ರಿಗೇಡ್ ನ ವತಿಯಿಂದ ವಿಜೇತ ವಿಶೇಷ ಶಾಲೆಯ ಮಕ್ಕಳೊಂದಿಗೆ ಪ್ರಾಥನೆ ಮತ್ತು ಮಕ್ಕಳಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ  ಪೂಜ್ಯ ಸ್ವಾಮಿಜಿಗೆ  ದಿನಾಂಕ 03/04/23 ರಂದು ಶ್ರದ್ಧಾಂಜಲಿ ಸಮರ್ಪಿಸಲಾಯಿತು.

 

 

ಕಳೆದ ಐದು ದಶಕಗಳ ಕಾಲ ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಅಹಿಂಸೆ, ತ್ಯಾಗ ಹಾಗೂ ಶಾಂತಿಯಿಂದ ಜೈನ ಪರಂಪರೆಯನ್ನು ಬೆಳಗಿದ್ದರು.