ಕಾರ್ಕಳದ ವೈದ್ಯನ ಅನುಪಮ ಸೇವೆಗೆ ನ್ಯೂಜೆರ್ಸಿಯಲ್ಲಿ ಗೌರವ

ಇದು ನಮ್ಮ ಉಡುಪಿ ಜಿಲ್ಲೆಯ ಕಾರ್ಕಳದ ವೈದ್ಯನ ಅನುಪಮ ಸೇವೆಯನ್ನು ಅಮೆರಿಕನ್ನರು ಗೌರವಿಸಿದ ಬಗೆ!

ಅಮೇರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿರುವ ಡಾ. ಅವಿನಾಶ್ ಅಡಿಗ ಅವರಿಗೆ 3 ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳ ಸೇವೆ ಸಲ್ಲಿಸಿದಕ್ಕಾಗಿ ಸರ್ಕಾರಿ ಸೇವೆ ಗೌರವವನ್ನು ನೀಡಿದೆ.

ಅಮೆರಿಕದ ಟಾಪ್ 10ರಲ್ಲಿರುವ ಆಸ್ಪತ್ರೆಯ ICUನಲ್ಲಿ ಸೇವೆ ಸಲ್ಲಿಸುತ್ತಿರುವ ಅವಿನಾಶ್, ಈವರೆಗೆ 1,500ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಹಾಗೆ ಬದುಕಿದವರು, ಸ್ಥಳೀಯರು, ಸಂಘಟನೆಯವರೆಲ್ಲಾ ಸೇರಿ 36 ವರ್ಷದ ಅವಿನಾಶರಿಗೆ ಡ್ರೈವ್ ಆಫ್ ಆನರ್ ನೀಡಿದರು.

ಗೋವಿಂದ ಅಡಿಗ, ಶಕುಂತಳಾ ಅಡಿಗರ ಪುತ್ರನಾದ ಅವಿನಾಶ್ ಓದಿದ್ದು ಬಳ್ಳಾರಿಯ VIMS ಮೆಡಿಕಲ್ ಕಾಲೇಜಿನಲ್ಲಿ. ರಾಜಸ್ಥಾನದ ಉದಯಪುರದ ರವೀಂದ್ರನಾಥ ಟ್ಯಾಗೋರ್‌ ವೈದ್ಯಕೀಯ ಶಿಕ್ಷಣ ಸಂಸ್ಥೆ, ಟೆಕ್ಸಾಸ್, ನ್ಯೂಯಾರ್ಕ್ ಗಳಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ.

LEAVE A REPLY

Please enter your comment!
Please enter your name here