ಕಾಮಸೂತ್ರದಲ್ಲಿ ಪೌರತ್ವ..! ಇದು ಪ್ರತಿಕ್ಷಣ ವಿಶೇಷ..

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಹೋರಾಟಗಳು ನಡೆಯುತ್ತಲೇ ಇವೆ. ಆದರೆ, ಪಟ್ಟು ಬಿಡದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಇವತ್ತು ಕೂಡ, ಸಿಎಎ ಜಾರಿ ಮಾಡುವ ವಿಚಾರದಲ್ಲಿ ಎರಡು ಮಾತಿಲ್ಲ. ಎಲ್ಲರೂ ಇದನ್ನು ಒಪ್ಪಲೇಬೇಕು ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಅಷ್ಟಕ್ಕೂ ಪೌರತ್ವ ಎಂದರೇನು..? ಪೌರತ್ವವನ್ನು ಮೊದಲು ಜಾರಿಗೆ ತಂದಿದ್ದು ಯಾರು..? ಪೌರತ್ವದ ವ್ಯಾಖ್ಯಾನಗಳು ಕಾಲಕಾಲಕ್ಕೆ ಹೇಗೆಲ್ಲಾ ಬದಲಾಗುತ್ತಾ ಹೋದವು? ಬೇರೆ ಯಾವುದೇ ದೇಶದ್ಲಾದರೂ ಧರ್ಮದ ಆಧಾರದ ಮೇಲೆ ಪೌರತ್ವ ನೀಡುವ ಕಾಯ್ದೆಗಳಿವೆಯಾ ಎಂಬುದನ್ನು ವಿವರವಾಗಿ ನೋಡೋಣ.

ಪೌರತ್ವ ಎಂಬ ಕಾನ್ಸೆಪ್ಟ್ ಆರಂಭವಾಗಿದ್ದು..;

ಪೌರತ್ವ ಎಂಬ ಪರಿಕಲ್ಪನೆಯನ್ನು ಮೊದಲು ಹುಟ್ಟುಹಾಕಿದ್ದು ಗ್ರೀಸ್‍ನ ತತ್ವಶಾಸ್ತ್ರಜ್ಞ ಅರಿಸ್ಟಾಟಲ್. ಅರಿಸ್ಟಾಟಲ್ ಪ್ರಕಾರ ಪೌರತ್ವ ಎಂದರೇ.. ದೇಶವನ್ನು ರೂಪಿಸುವ ಚರ್ಚೆಯಲ್ಲಿ ಪಾಲ್ಗೊಳ್ಳುವ ಹಕ್ಕು ಅಥವಾ ಕಾನೂನು ಪಾಲಕರಾಗಿ ಮುಂದುವರೆಯುವ ಹಕ್ಕು ಹೊಂದಿರುವುದು. ಪೌರತ್ವದ ಹಕ್ಕು ಗ್ರಹಾಂತರ ವಾಸಿಗಳಿಗೆ, ಗುಲಾಮರಿಗೆ ಇರಲ್ಲ ಎಂದು ಕೂಡ ಅರಿಸ್ಟಾಟಲ್ ಸ್ಪಷ್ಟಪಡಿಸಿದ್ದರು.

ಯುರೋಪ್ ಮೇಧಾವಿಗಳ ವ್ಯಾಖ್ಯಾನ;

ನಂತರದ ದಿನಗಳಲ್ಲಿ ಪೌರತ್ವಕ್ಕೆ ಯುರೋಪ್ ಮೇಧಾವಿಗಳು ಬೇರೆಯ ವ್ಯಾಖ್ಯಾನ ನೀಡಿದರು. ಯುರೋಪ್ ಮೇಧಾವಿಗಳ ಪ್ರಕಾರ;
ಮತ ಚಲಾವಣೆಯ ಹಕ್ಕು ಹೊಂದಿರುವುದು. ಮತದಾನದ ಮೂಲಕ ಆಯ್ಕೆ ಮಾಡಿದ ಸರ್ಕಾರದಿಂದ ಪ್ರಯೋಜನ ಪಡೆಯುವುದು. ಈ ಮೂಲಕ ಕಾಲ ಕಾಲಕ್ಕೆ ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳುವುದು. ವಲಸೆದಾರರಿಗೆ ಜಾತಿ, ಮತ, ವರ್ಣ ನೋಡದೇ ಅವರು ದೇಶಕ್ಕೆ ಸಲ್ಲಿಸಿದ ಶಾರೀರಿಕ ಶ್ರಮವನ್ನು ಪರಿಗಣಿಸಿ ಪೌರತ್ವ ನೀಡಬಹುದು.

ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉಲ್ಲೇಖವಿಲ್ಲ. ಆದರೆ, ವಾತ್ಸಾಯನನ ಕಾಮಸೂತ್ರದಲ್ಲಿ `ನಾಗರಿಕ’ ಉಲ್ಲೇಖ

ದುರಾದೃಷ್ಟವಶಾತ್ ಭಾರತೋಯ ಪುರಾಣಗಳಲ್ಲಿ, ಇತಿಹಾಸಗಳಲ್ಲಿ, ಕೌಟಿಲ್ಯನು ಬರೆದ ಅರ್ಥಶಾಸ್ತ್ರದಲ್ಲಿ ಪೌರತ್ವದ ಕುರಿತು ಯಾವುದೇ ವ್ಯಾಖ್ಯಾನಗಳಿಲ್ಲ. ಆದರೆ, ವಾತ್ಸಾಯನ ಬರೆದ ಕಾಮಸೂತ್ರದಲ್ಲಿ ಮಾತ್ರ ನಾಗರಿಕ ಎಂದರೇ ಯಾರು..? ಎಂಬ ಬಗ್ಗೆ ವ್ಯಾಖ್ಯಾನವಿದೆ.

ಕಾಮಸೂತ್ರದಲ್ಲಿರುವ ಪ್ರಕಾರ;
ನಾಗರಿಕನೆಂದರೇ ಬಟ್ಟೆ, ಆಭರಣ ಧರಿಸುವ ಯಜಮಾನ. ಮಧ್ಯಾಹ್ನ ಮಿತ್ರರ ಜೊತೆ ಹರಟೆ ಹೊಡೆಯುವವನು, ಸಂಜೆ ಗೆಳೆಯರೊಂದಿಗೆ ಸೇರಿ ಹಾಡು ಹಾಡುತ್ತಾ ಟೈಂ ಪಾಸ್ ಮಾಡುವವನು, ರಾತ್ರಿ ವೇಳೆ, ಅಲಂಕೃತ ಶಯನ ಗೃಹದಲ್ಲಿ ತಮಗೆ ಮೀಸಲಿರಿಸಿದ ಯುವತಿ ಜೊತೆ ಶೃಂಗಾರ ಮಾಡುವವನು ಎಂದು ಕಾಮಸೂತ್ರದಲ್ಲಿ ವ್ಯಾಖ್ಯಾನ ಮಾಡಲಾಗಿದೆ. ಆದರೆ, ಇಲ್ಲಿ ದೇಶ, ದೇಶದೊಳಗೆ ಪೌರತ್ವದ ಬಗ್ಗೆ ಎಲ್ಲಿಯೂ ಉಲ್ಲೇಖ ಆಗಿಲ್ಲ.

ಯಾವ ದೇಶದಲ್ಲೂ ಇಲ್ಲ ಧರ್ಮಾಧಾರಿತ ಪೌರತ್ವ..

ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬರುವ ಮುಸ್ಲಿಮೇತರ ಶರಣಾರ್ಥಿಗಳಿಗೆ ಪೌರತ್ವ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಆದರೆ, ಮೇಲ್ಕಂಡ ಮೂರು ದೇಶಗಳಲ್ಲಿ ಅಲ್ಪಸಂಖ್ಯಾತರಿಗೆ ವಿರುದ್ಧವಾಗಿ ಅಥವಾ ಧರ್ಮದ ಆಧಾರದ ಮೇಲೆ ಪೌರತ್ವ ಕಲ್ಪಿಸುವ ಯಾವುದೇ ಕಾಯ್ದೆಗಳು ಇಲ್ಲ.

ಈಗಾಗಲೇ ಶ್ವೇತವರ್ಣಿಯರರಿಗೆ ಅನುಕೂಲಕರವಾಗಿ ವ್ಯವಹರಿಸುತ್ತಿರುವ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಹಿಂದೂಗಳಿಗೆ ಅಮೆರಿಕಾ ಪೌರತ್ವ ಇಲ್ಲ ಎಂದರೇ, ಅಥವಾ ಹಿಂದೂಯೇತರರಿಗೆ ಪೌರತ್ವ ಕಲ್ಪಿಸುವ ಕಾಯ್ದೆ ಜಾರಿಗೆ ತಂದರೆ ಏನಾಗುತ್ತದೆ ಎಂಬುದನ್ನು ಊಹಿಸಿಕೊಳ್ಳಲು ಅಸಾಧ್ಯವಾಗುತ್ತದೆ ಎಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವವರು ಹೇಳುತ್ತಿದ್ದಾರೆ.

LEAVE A REPLY

Please enter your comment!
Please enter your name here