ಹಿರಿಯ ನಟ ಶತ್ರುಘ್ನ ಸಿನ್ಹಾ ಅವರು ಮಂಗಳವಾರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತೊರೆದು ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ.
ಈ ಕುರಿತಾಗಿ ಅಧಿಕೃತ ಹೇಳಿಕೆ ನೀಡಿದ ಶತ್ರುಘ್ನ ಸಿನ್ಹಾ, ಬಂಗಾಳದ ಹುಲಿ ಮಮತಾ ಬ್ಯಾನರ್ಜಿ ಅವರ ಆಹ್ವಾನದ ಮೇರೆಗೆ ನಾನು ಟಿಎಂಸಿಗೆ ಸೇರಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ನಮ್ಮದೇ ಆದ, ಬಂಗಾಳದ ಹುಲಿ, ಪ್ರಯತ್ನಿಸಿದ, ಪರೀಕ್ಷಿಸಿದ, ಯಶಸ್ವಿಯಾದ ಗೌರವಾನ್ವಿತ ಸಿಎಂ, ಬಂಗಾಳ ಅವರ ಆಹ್ವಾನದ ಮೇರೆಗೆ ನಾನು ಟಿಎಂಸಿಗೆ ಸೇರಿದ್ದೇನೆ. ಈ ವಿಚಾರವನ್ನು ಹಂಚಿಕೊಳ್ಳಲು ಸಂತೋಷವಾಗಿದೆ. ಒಬ್ಬ ಮಹಾನ್ ಮಹಿಳೆ, ಜನಸಾಮಾನ್ಯರ ಮಹಾನ್ ನಾಯಕಿಯ ಕ್ರಿಯಾತ್ಮಕ ನಾಯಕತ್ವದಲ್ಲಿ ಸ್ಪರ್ಧಿಸಲಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
Happy to share that on an invite from our own, tigress of Bengal, tried, tested, successful honourable CM, Bengal @Mamataofficial I have joined #TMC. Shall be contesting under the dynamic leadership of a great lady, great leader of the masses in true sense, Mamata Banerjee
— Shatrughan Sinha (@ShatruganSinha) March 15, 2022
ಸಿನ್ಹಾ ಅವರು 2019 ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರು. ಇದೀಗ, ಕಾಂಗ್ರೆಸ್ನಿಂದ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ. ಏಪ್ರಿಲ್ 12 ರಂದು ನಡೆಯಲಿರುವ ಪಶ್ಚಿಮ ಬಂಗಾಳ ಉಪಚುನಾವಣೆಯಲ್ಲಿ ಶತ್ರುಘ್ನ ಸಿನ್ಹಾ ಟಿಎಂಸಿ ಅಸನ್ಸೋಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.