ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ – ಆರ್‌ಬಿಐ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಸಂವಾದ – ಇಬ್ಬರೂ ಏನ್‌ ಮಾತಾಡಿದ್ದಾರೆ..? ಕೇಳಿ

ಕೊರೋನಾ ಮಹಾಮಾರಿ ಮತ್ತು ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ಮೇಲಾಗಲಿರುವ ಪರಿಣಾಮಗಳ ಬಗ್ಗೆ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಆರ್‌ಬಿಐನ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಜೊತೆಗೆ ವೀಡಿಯೋ ಸಂವಾದ ನಡೆಸಿದ್ದಾರೆ.

ಈ ಸಂದರ್ಶನವನ್ನು ನಾಳೆ ಬೆಳಗ್ಗೆ ೯ ಗಂಟೆಗೆ ಕಾಂಗ್ರೆಸ್‌ ತನ್ನ ಸೋಷಿಯಲ್‌ ಮೀಡಿಯಾ ವೇದಿಕೆಗಳಾದ ಟ್ವಿಟ್ಟರ್‌, ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಚಾರ ಮಾಡಲಿದೆ.

ವೈರಸ್‌ನಿಂದಾಗಿ ದೇಶದ ಆರ್ಥಿಕತೆ ಮೇಲೆ ಆಗಲಿರುವ ಪರಿಣಾಮಗಳು ಏನು ಎಂದು ರಾಹುಲ್‌ ಗಾಂಧಿ ಪ್ರಶ್ನೆ ಕೇಳಿದ್ದಾರೆ. ಕೊರೋನಾ ವೈರಸ್‌ನಿಂದ ಸೃಷ್ಟಿ ಆಗಿರುವ ಸನ್ನಿವೇಶದಲ್ಲಿ ಭಾರತದ ತನ್ನ ಕೈಗಾರಿಕೆಗಳಿಗೆ ವಿಶೇಷ ಅವಕಾಶ ಒದಗಿಸಿದೆ ಎಂದು ಹೇಳಿದ್ದಾರೆ.

ಬಡವರಿಗೆ ಸಹಾಯ ಮಾಡಲು ಎಷ್ಟು ಹಣ ಬೇಕು ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ರೆ ರಘುರಾಮ್‌ ರಾಜನ್‌ ೬೫ ಸಾವಿರ ಕೋಟಿ ರೂಪಾಯಿ ಸಾಕು ಎಂದು ಉತ್ತರಿಸಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ವಿಭಜನಾ ಮನಸ್ಥಿತಿಯ ಬಗ್ಗೆಯೂ ಇಬ್ಬರೂ ಸಮಾಲೋಚನೆ ನಡೆಸಿದ್ದಾರೆ.

ಈ ಸಂದರ್ಶನದ ಪೂರ್ಣ ವೀಡಿಯೋ ನಾಳೆ ಬೆಳಗ್ಗೆ ೯ ಗಂಟೆಗೆ ಪ್ರಚಾರ ಆಗಲಿದೆ.

LEAVE A REPLY

Please enter your comment!
Please enter your name here