ಕಹಿ ಸುದ್ದಿ ಹೇಳಿ ಕಣ್ಣೀರಿಟ್ಟ ಖ್ಯಾತ ಹೀರೋ ರಾಣಾ.. ಕಾರಣ ಏನು ಗೊತ್ತಾ..?

ನಿಮಗೆ ಬಾಹುಬಲಿ ಸಿನಿಮಾದ ವಿಲನ್ ಬಲ್ಲಾಳ ದೇವ ನೆನಪಿರಬೇಕು ಅಲ್ವಾ.. ರಾಕ್ಷಸ ಕಾಲಕೇಯನ ವಧಿಸಿ, ಬೃಹತ್ ಕೋಣವನ್ನು ಒಂದೇ ಎಟಿಗೆ ಮಲಗುವಂತೆ ಮಾಡಿದ ಬಲ್ಲಾಳ ದೇವ ಪಾತ್ರ ನಿರ್ವಹಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೈ ಎನಿಸಿಕೊಂಡ ಆಜಾನುಬಾಹು ನಟ ದಗ್ಗುಬಾಟಿ ರಾಣಾ ತಮ್ಮ ಅರೋಗ್ಯದ ಕುರಿತಂತೆ ಆತಂಕಕಾರಿ ವಿಚಾರವನ್ನು ಬಯಲು ಮಾಡಿದ್ದಾರೆ. ಹೌದು ಬಲ್ಲಾಳ ದೇವ ಖ್ಯಾತಿಯ ರಾಣಾಗೆ ಮಾರಣಾಂತಿಕ ಕಾಯಿಲೆ ಎದುರಾಗಿದೆ.

ಇತ್ತೀಚಿಗಷ್ಟೆ ಮದುವೆ ಆಗಿದ್ದ ನಟ ರಾಣಾ ಆರೋಗ್ಯದ ಬಗ್ಗೆ ಕಳೆದ‌ ಕೆಲ ದಿನಗಳಿಂದ ಹತ್ತಾರು ಸುದ್ದಿಗಳು ಹರಿದಾಡುತ್ತಿವೆ. ಅವರಿಗೆ ಕಿಡ್ನಿ‌ ಕಾಯಿಲೆ ಇದೆ. ವಿದೇಶಗಳಲ್ಲಿ ಚಿಕಿತ್ಸೆ ಪಡೆದುಕೊಳ್ತಿದ್ದಾರೆ ಅಂತೆಲ್ಲಾ ಸುದ್ದಿ ಹರಡಿತ್ತು. ಈ ಸುದ್ದಿಗಳಿಗೆ ಸಂಬಂಧಿಸಿದಂತೆ ರಾಣಾ ಇದುವರೆಗೂ ತುಟಿ ಬಿಚ್ಚಿರಲಿಲ್ಲ. ಮೊನ್ನೆ ಅರಣ್ಯ ಸಿನಿಮಾದ ಫಸ್ಟ್ ಲುಕ್‌ ರಿಲೀಸ್ ಆದಾಗ, ಓಹ್ ಈ ಸಿನಿಮಾಗಾಗಿ ರಾಣಾ ತೂಕ ಇಳಿಸಿಕೊಂಡಿರಬಹುದು ಅಂತಾ ಎಲ್ಲರೂ ಭಾವಿಸಿದ್ರು. ಆದರೆ, ಇದಕ್ಕೆಲ್ಲಾ ಖುದ್ದು ರಾಣಾ ಫುಲ್ ಸ್ಟಾಪ್ ಇಟ್ಟಿದ್ದಾರೆ. ಅಹಾ ಓಟಿಟಿಯಲ್ಲಿ ನಟಿ ಸಮಂತಾ ನಡೆಸಿಕೊಡುವ ಸ್ಯಾಮ್ ಜ್ಯಾಮ್‌ ಕಾರ್ಯಕ್ರಮದಲ್ಲಿ ಪಾಲ್ಗೊ‍ಂಡ ನಟ ರಾಣಾ ತಮ್ಮ ಆರೋಗ್ಯದ ಕುರಿತಂತೆ ಆತಂಕಕಾರಿ ಮಾಹಿತಿಯನ್ನು ಹೊರಗೆಡವಿದ್ದಾರೆ.

ಜೀವನ ತುಂಬಾ ಫಾಸ್ಟಾಗಿ ಮುಂದಕ್ಕೆ ಹೋಗ್ತಿರುವಾಗ ಆಕಸ್ಮಾತ್ ಆಗಿ ಒಂದು ಪಾಸ್ ಬಟನ್ ಬಂದಿದೆ. ಹುಟ್ಟಿದಾಗಿನಿಂದಲೂ ನನಗೆ ಬಿಪಿ ಇದೆ. ಇದ್ರಿಂದಾಗಿ ಹೃದಯ ಸಮಸ್ಯೆ ಕಾಣಿಸಿಕೊಂಡಿದೆ. ಕಿಡ್ನಿಗಳು ಹಾಳಾಗುವ ಸಂಭವ ಇದೆ. ಸ್ಟ್ರೋಕ್ ಹ್ಯಾಮರೇಜ್ (ಮೆದುಳಿನ ನರಗಳು ಸಿಡಿಯುವುದು)ಸಾಧ್ಯತೆ ಶೇಕಡಾ 70ರಷ್ಟು, ಸಾಯುವ ಅವಕಾಶಗಳು ಶೇಕಡಾ 30ರಷ್ಟಿದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಹೇಳುವಾಗ ರಾಣಾ ಕಣ್ಣಲ್ಲಿ ನೀರು ಜಿನುಗಿದ್ದವು.

ಇದಕ್ಕೆ ಕೂಡಲೇ ಸ್ಪಂದಿಸಿದ ನಟಿ ಸಮಂತಾ, ನಿಮ್ಮ‌ಸುತ್ತಲಿನ ಜನ ಹತ್ತಾರು ಮಾತುಗಳನ್ನು ಅಡಿಕೊಂಡರೂ, ನೀವು ಮಾತ್ರ ಧೈರ್ಯವಾಗಿದ್ದೀರಿ. ಇದನ್ನು‌ನಾನು ಕಣ್ಣಾರೆ ಕಂಡಿದ್ದೇನೆ. ನೀವು ನಿಜವಾಗಲೂ ಸೂಪರ್‌ ಹೀರೊ ಎಂದು ಹೇಳಿ ರಾಣಾಗೆ ಸಮಾಧಾನ ಮಾಡಿದರು.

ಅಂದ‌ಹಾಗೆ, ನಟ ರಾಣಾ ದಗ್ಗುಬಾಟಿಗೆ ಒಂದು‌ಕಣ್ಣು ಕಾಣುವುದೇ ಇಲ್ಲ. ನಟಿಸುವಾಗ ಇದು ಗೊತ್ತಾಗುವುದು ಇಲ್ಲ. ರಾಣಾ ಆದಷ್ಟು ಬೇಗ ಚೇತರಿಸಿಕೊಳ್ಳಲಿ‌ ಎಂಬುದು ಪ್ರತಿಕ್ಷಣ ಹಾರೈಕೆ

LEAVE A REPLY

Please enter your comment!
Please enter your name here