ಕಲ್ಲಂಗಡಿಯಲ್ಲಿ ನೊರೆ.. ತಿನ್ನುವ ಮುನ್ನ ಎಚ್ಚರ..

ಆರೋಗ್ಯಕ್ಕಾಗಿ ಹಣ್ಣು ತಿನ್ನಿ ಅಂತಾರೆ.. ಆದರೆ ಹಣ್ಣುಗಳೇ ವಿಷವಾದರೇ.. ಲಾಭದ ಆಸೆಯಿಂದ ಕೆಲವರು ಹಣ್ಣುಗಳನ್ನು ಅಡ್ಡದಾರಿಯಲ್ಲಿ ಬೆಳೆಯುತ್ತಿದ್ದಾರೆ. ನೈಸರ್ಗಿಕವಾಗಿ ಅಲ್ಲದೇ ವಿಷಕಾರಿ ರಾಸಾಯನಿಕಗಳನ್ನು ಹಾಕಿ ಹಣ್ಣು ಬೆಳೆಯುತ್ತಿದ್ದಾರೆ. ಪರಿಣಾಮ ಇಲ್ಲಿದೆ ನೋಡಿ.. ಕಲ್ಲಂಗಡಿ ಹಣ್ಣಿನಲ್ಲಿ ನೊರೆ ಉಕ್ಕುತ್ತಿದೆ.

ಖ್ಯಾತ ಪರಿಸರವಾದಿ ಜೋಸೆಫ್ ಹೂವರ್ ಅವರು ಫೇಸ್ ಬುಕ್ ನಲ್ಲಿ ಹೇಳಿಕೊಂಡಂತೆ..

ಬೆಂಗಳೂರಿನ ಆರ್ ಆರ್ ನಗರದ ಸೂಪರ್ ಮಾರ್ಕೆಟ್ ನಲ್ಲಿ ಜುಲೈ 28ರಂದು ಕಲ್ಲಂಗಡಿ ಹಣ್ಣನ್ಮು ಖರೀದಿಸಲಾಗಿದೆ. ಇಂದು ಬೆಳಗ್ಗೆ ಕಲ್ಲಂಗಡಿ ಹಣ್ಣನ್ನು ತಿನ್ನೋಣ ಎಂದು ಕಟ್ ಮಾಡಿದರೇ ನೊರೆ ಉಕ್ಕಿದೆ.

ಇದನ್ನು ಬಹುಷಃ ವಿಷಕಾರಿ ವಾತಾವರಣದಲ್ಲಿ ಬೆಳೆಯಲಾಗಿದೆ‌ ಅನ್ನಿಸುತ್ತದೆ. ಇದನ್ನು ತಿನ್ನುವುದರಿಂದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಂಭವ ಇದೆ. ಏನು ತಿನ್ನುತ್ತಿದ್ದೇವೆ..? ಎಲ್ಲಿ ಬೆಳೆದಿರುವುದನ್ನು ತಿನ್ನುತ್ತಿದ್ದೇವೆ ಎಂಬ ಅರಿವು ಜನರಲ್ಲಿ ಇರಬೇಕು.

LEAVE A REPLY

Please enter your comment!
Please enter your name here