ಕರ್ನಾಟಕ ಸಿಇಟಿ ಪರೀಕ್ಷೆಗೆ ಅಧಿಕೃತ ವೇಳಾಪಟ್ಟಿ ಪ್ರಕಟ.

ಈ ಬಾರಿಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪರೀಕ್ಷೆಯ ದಿನಾಂಕ ಪ್ರಕಟವಾಗಿದೆ. ಜುಲೈ 30 ಮತ್ತು 31ರಂದು ಪರೀಕ್ಷೆ ನಡೆಯಲಿದೆ. ಪರೀಕ್ಷಾ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟ ಮಾಡಿದೆ.

ಜುಲೈ 30, 31 ರಂದು ನಡೆಯಲಿರುವ ಸಿಇಟಿ ಪರೀಕ್ಷೆಯ ಹೊಸ ವೇಳಾಪಟ್ಟಿ ಹೀಗಿದೆ.

30/7/2020 ಗುರುವಾರ ಬೆಳಗ್ಗೆ 10.30ರಿಂದ 11.50 ಜೀವಶಾಸ್ತ್ರ (60 ಅಂಕ)

ಮಧ್ಯಾಹ್ನ 2.30ರಿಂದ 3.50ರ ತನಕ ಗಣಿತ (60 ಅಂಕ).

31/7/2020 ಶುಕ್ರವಾರ ಬೆಳಗ್ಗೆ 10.30ರಿಂದ 11.50 ತನಕ ಭೌತಶಾಸ್ತ್ರ (60 ಅಂಕ)

ಮಧ್ಯಾಹ್ನ 2.30ರಿಂದ 3.50ರ ತನಕ ರಸಾಯನ ಶಾಸ್ತ್ರ (60 ಅಂಕಗಳು)

ಆಗಸ್ಟ್ 1 ರಂದು ಗಡಿ ನಾಡು- ಹೊರನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ.

ಈ ಮೊದಲು ಏಪ್ರಿಲ್ 22 ಮತ್ತು 23ರಂದು ಸಿಇಟಿ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟ ಮಾಡಲಾಗಿತ್ತು. ಆದರೆ, ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಕಾರಣ ಪರೀಕ್ಷೆಯನ್ನು ಮೂಂದೂಡಲಾಗಿತ್ತು.

LEAVE A REPLY

Please enter your comment!
Please enter your name here